ಸಂವಿಧಾನ, ವಚನಗಳಿಂದ ಸಮೃದ್ಧ ರಾಷ್ಟ್ರ ಸಾಧ್ಯ
Mar 28 2024, 12:46 AM ISTಸಂವಿಧಾನ ಮತ್ತು ವಚನಗಳು ಬೆರೆತು ಕೆಲಸ ಮಾಡಿದರೆ ಸಮೃದ್ಧ ಪ್ರಜ್ಞಾವಂತ ರಾಷ್ಟ್ರ ನಿರ್ಮಿಸಬಹುದು. ಬಸವಣ್ಣನವರು ಸಕಲ ಜೀವರಾಶಿಗೆ ಲೇಸನೇ ಬಯಸುವ ಮನೋಧರ್ಮದ ವಿಶ್ವಮಾನವ. ಅಂಬೇಡ್ಕರ್, ಗಾಂಧೀಜಿ, ಕುವೆಂಪು, ಅಂಥವರ ಚಿಂತನೆ ನಮ್ಮ ಪ್ರಜಾಪ್ರಭುತ್ವದ ಉಳಿವಿಗೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕರ ವೇದಿಕೆ ವಚನ ಸಂವಿಧಾನದಲ್ಲಿ ಬದುಕೋಣ, ಸಂವಿಧಾನ ಉಳಿಸೋಣ, ಜಾಗೃತಿಯಿಂದ ಮತದಾನ ಮಾಡೋಣ ದ್ಯೇಯ ವಾಕ್ಯದೊಂದಿಗೆ ಜಾಗೃತಿ ಜಾಥಾ ನಡೆಸಲಿದೆ ಎಂದು ವೇದಿಕೆ ಸಂಚಾಲಕ ಸಿ.ಕೆ. ಜಗನ್ ಹೇಳಿದರು.