ಭಾರತ ಸಂವಿಧಾನ ಅರ್ಥೈಸಿಕೊಳ್ಳೋದು ವಿದ್ಯಾರ್ಥಿಗಳ ಕರ್ತವ್ಯ
Nov 30 2023, 01:15 AM ISTಮುಖ್ಯ ಅತಿಥಿ, ಕುವೆಂಪು ವಿಶ್ವವಿದ್ಯಾಲಯದ ರಾ.ಸೇ.ಯೋಜನೆ ಸಂಯೋಜಕ ಡಾ.ನಾಗರಾಜ ಪರಿಸರ ಮಾತನಾಡಿ, ಸಾಧನೆ ಸೋಮಾರಿಯ ಸೊತ್ತಲ್ಲ. ಅದು ಸಾಧಕನ ಸೊತ್ತು. ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾಮಾಜಿಕ ಹೊಣೆಗಾರಿಕೆ ಇಟ್ಟುಕೊಂಡು ಮುನ್ನಡೆಯಬೇಕು ಎಂದರು. ಇಂದಿನ ಔಪಚಾರಿಕ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಲ್ಲಿ ಜೀವನಾನುಭವವನ್ನು ನೀಡುವಲ್ಲಿ ಸೋತಿದೆ. ಎನ್ಎಸ್ಎಸ್ ಯುವಕರಿಗೆ ತಮ್ಮನ್ನು ತಾವು ಅರ್ಥೈಸಿಕೊಳ್ಳಲು ಮತ್ತು ಸಮಾಜವನ್ನು ಅರ್ಥಮಾಡಿಕೊಂಡು ಮುನ್ನಡೆಯಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.