ಪ್ರಜ್ವಲ್‌ನದ್ದು ಅತಿರೇಕದ ಹೇಯ ಕೃತ್ಯ: ಸಚಿವ ಎಂಬಿಪಾ
May 08 2024, 01:06 AM ISTಕನ್ನಡಪ್ರಭ ವಾರ್ತೆ ವಿಜಯಪುರ ಪ್ರಜ್ವಲ್‌ನದ್ದು ಅತಿರೇಕದ ಹೇಯ ಕೃತ್ಯವಾಗಿದ್ದು, ಕಾನೂನು ಪ್ರಕಾರ ಆತನಿಗೆ ಕಠಿಣ ಶಿಕ್ಷೆ ಆಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿಗೆ ಪ್ರಜ್ವಲ್ ಹಾಜರಾಗಬೇಕು. ಕಾನೂನಿಗೆ ತಲೆಬಾಗಲೇಬೇಕು. ಈ ಪ್ರಕರಣದಿಂದ ಬಿಜೆಪಿಗೆ ಹಿನ್ನಡೆ ಆಗಲಿದ್ದು, ಹೆಣ್ಣುಮಕ್ಕಳು, ತಾಯಂದಿರು ವಿರೋಧವಾಗಿದ್ದಾರೆ ಎಂದರು.