ಬೆಳ್ಳೂರು ಪಟ್ಟಣ ಅಭಿವೃದ್ಧಿಗೆ ಕ್ರಮ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ
Jan 24 2024, 02:03 AM ISTಚುನಾವಣೆ ವೇಳೆ ಜನಸಾಮಾನ್ಯರು ಬೆಳ್ಳೂರು ಪಟ್ಟಣದ ಅಭಿವೃದ್ಧಿಗೆ ಒಲವು ವ್ಯಕ್ತಪಡಿಸಿದ್ದರು. ಹೀಗಾಗಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲು ಮೂಲ ಸೌಕರ್ಯ ಕಲ್ಪಿಸಲಾಗುವುದು. ಪಟ್ಟಣ ಪಂಚಾಯ್ತಿಗೆ ನೂತನ ಕಟ್ಟಡದ ಜೊತೆಗೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು. ಮಾರ್ಕೋನಹಳ್ಳಿಯಿಂದ ಬೆಳ್ಳೂರು ಪಟ್ಟಣಕ್ಕೆ ನೀರು ಸರಬರಾಜು ಮಾಡುವುದು ಅಲ್ಪಸ್ವಲ್ಪ ಸಮಸ್ಯೆ ಇದ್ದು, ಇದನ್ನು ಶೀಘ್ರ ಬಗೆಹರಿಸಿ ಜನ ಸಾಮಾನ್ಯರಿಗೆ ನೀರು ಪೂರೈಸಲು ಅಗತ್ಯ ಕ್ರಮ ವಹಿಸಲಾಗುವುದು.