ಪ್ರತಿನಿತ್ಯ ಕೆಲ ಸಮಯ ಯೋಗಕ್ಕೆ ಸಮಯ ಮೀಸಲಿಡಿ
Jun 22 2025, 11:47 PM ISTಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ನಗರದ ಸ್ಕಾಲರ್ಸ್ ಶಾಲೆಯ ಮಕ್ಕಳು ಯೋಗ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. ಪ್ರತಿನಿತ್ಯ ಮಕ್ಕಳು ಕೆಲ ಸಮಯವನ್ನು ಯೋಗಾಸನ ಮತ್ತು ಧ್ಯಾನವನ್ನು ಮಾಡಿ ಸ್ವಾಸ್ಥರಾಗಬೇಕು. ಯೋಗ ಆರೋಗ್ಯಕ್ಕೆ, ಸಂಜೀವಿನಿ ಯೋಗ ಮಾಡಿ ನಿರೋಗಿಗಳಾಗಿ, ಸದೃಢರಾಗಬೇಕೆಂದು ಸ್ಕಾಲರ್ಸ್ ಶಾಲೆಯ ಆಡಳಿತ ಅಧಿಕಾರಿಗಳಾದ ಡಾ. ಎಚ್.ಎನ್. ಚಂದ್ರಶೇಖರ್ ಮಕ್ಕಳಿಗೆ ತಿಳಿಸಿದರು.