ಬಿಡುವಿನ ಸಮಯ ಸಮಾಜ ಸಂಘಟನೆಗೆ ನೀಡಿ
Mar 19 2024, 12:47 AM ISTಕೆರೂರ: ಹೆಣ್ಣು ಮಕ್ಕಳು ತಮ್ಮ ಬಿಡುವಿನ ಸಮಯವನ್ನು ಸಮಾಜ ಸಂಘಟನೆಯಲ್ಲಿ ತೊಡಗಿಸಬೇಕು ಎಂದು ವೀರ ಪುಲಕೇಶಿ ಕೋ. ಆಫ್ ಬ್ಯಾಂಕ್ ನಿರ್ದೇಶಕ ಗಂಗಾಧರ ಘಟ್ಟದ ಹೇಳಿದರು. ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ನೂತನ ಅಕ್ಕಮಹಾದೇವಿ ಮಹಿಳಾ ಬಣಜಿಗ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆ ಮನಸು ಮಾಡಿದರೆ ಏನನ್ನಾದರೂ ಸಾಧಿಸ ಬಲ್ಲಳು ಎಂದರು.