ಸರ್ಕಾರಿ ಶಾಲೆಗಳಲ್ಲಿನ ಸವಲತ್ತು ಬಳಸಿಕೊಂಡು ಓದಿ
Jun 22 2025, 11:47 PM ISTಸರ್ಕಾರಿ ಶಾಲೆಗಳಲ್ಲಿ ದೊರೆಯುತ್ತಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು, ಚೆನ್ನಾಗಿ ವಿದ್ಯೆ ಕಲಿತು, ಉತ್ತಮ ಬದುಕನ್ನು ರೂಪಿಸಿಕೊಳ್ಳಿ ಎಂದು ಹಳ್ಳಿಮೈಸೂರು ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಗೆಳೆಯರ ಬಳಗದ ಪ್ರಭುಶಂಕರ್ ಸಲಹೆ ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಹಳ್ಳಿಯಲ್ಲೇ ಸರ್ಕಾರಿ ಶಾಲೆಗಳು, ಶಾಲೆಗಳಲ್ಲಿ ಬಿಸಿ ಊಟ, ಮೊಟ್ಟೆ, ಬಾಳೆಹಣ್ಣು, ಸಮವಸ್ತ್ರ, ಪುಸ್ತಕಗಳನ್ನು ಉಚಿತವಾಗಿ ನೀಡಿದರೆ, ದಾನಿಗಳು ನೋಟ್ ಪುಸ್ತಕ, ಪೆನ್ನು, ಬ್ಯಾಗ್‌ಗಳನ್ನು ದಾನವಾಗಿ ನೀಡುತ್ತಾರೆ ಎಂದರು.