ಅವ್ಯವಸ್ಥೆ ಆಗರ ಆಜೂರ ಸರ್ಕಾರಿ ಶಾಲೆ

Feb 28 2025, 12:52 AM IST
ಕನ್ನಡಪ್ರಭ ವಾರ್ತೆ ಕಾಗವಾಡಕರ್ನಾಟಕ ಹಾಗೂ ಮಹಾರಾಷ್ಟ್ರದ ಅಥಣಿ ತಾಲೂಕಿನ ಗಡಿ ಭಾಗದ ಅಭಿವೃದ್ಧಿ ಅಂದ್ರೆ ಈ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಯಾಕಿಷ್ಟು ನಿರ್ಲಕ್ಷ್ಯ ಅಂತಾ ಗೊತ್ತಾಗೊತ್ತಿಲ್ಲ. ಬಡಜನರ ಕೈಗೆ ಕೆಲಸವಿಲ್ಲದೆ ಗುಳೆ ಹೊರಟಿರುವ ಜನ ಒಂದೆಡೆಯಾದರೆ, ಸರಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದೆ ಮಕ್ಕಳು ಶಾಲೆಗೆ ಹೋಗದ ಪರಿಸ್ಥಿತಿ ಮತ್ತೊಂದೆಡೆ. ಈ ಎಲ್ಲವೂಗಳ ಮಧ್ಯ ಕನ್ನಡ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊಠಡಿಗಳ ಸಮಸ್ಯೆ ಎದುರಾಗಿದ್ದು ಅರಳಿ ಮರದ ಕೆಳಗೆ ಕುಳಿತು ವಿದ್ಯಾರ್ಥಿಗಳು ಪಾಠ ಕೇಳುವ ಅನಿವಾರ್ಯತೆ ಅಥಣಿ ತಾಲೂಕಿನ ಆಜೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣವಾಗಿದೆ. ಗಡಿನಾಡಿನಲ್ಲಿ ಕನ್ನಡ ಶಾಲೆಗಳಿಗೆ ಬಂದೊದಗಿರುವ ದುಸ್ಥಿತಿ ಇದು ಸಾರಿ ಹೇಳುವಂತಿದೆ.