ರಾಜ್ಯದ 3 ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತ
Nov 07 2024, 12:35 AM IST ಚಿಕ್ಕಮಗಳೂರು, ರಾಜ್ಯದ 3 ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ (ಎಸ್ಐಡಿಎಚ್) ಕಲ್ಲು ಹಾಕಿದೆ.- ಇದು, ಮಕ್ಕಳ ಪೋಷಕರ ಆಕ್ರೋಶದ ಮಾತು.ಎಸ್ಐಡಿಎಚ್ನಲ್ಲಿನ ಉಂಟಾದ ತಾಂತ್ರಿಕ ದೋಷದಿಂದಾಗಿ ರಾಜ್ಯದ 3 ಐಟಿಐ ಕಾಲೇಜುಗಳ ಸುಮಾರು 450 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.