ತಲಕಾಡಿನಲ್ಲಿ ರಣಬಿಸಿಲಿನ ತಾಪಕ್ಕೆ ಹೈರಾಣಾದ ಸಾರ್ವಜನಿಕರು
Apr 16 2024, 01:03 AM ISTಸಿಲಿನ ತಾಪ ಎಷ್ಟು ಹೆಚ್ಚಾಗಿದೆ ಎಂದರೆ ಬೆಳಗ್ಗೆ 11ರ ನಂತರ ಡಾಂಬರು ರಸ್ತೆಯಲ್ಲಿ ಸಂಚರಿಸುವುದೇ ತ್ರಾಸದಾಯಕವಾಗಿದೆ. ದ್ವಿಚಕ್ರ ವಾಹನಗಳಲ್ಲಿ ಮಧ್ಯಾಹ್ನದ ಉರಿ ಬಿಸಿಲಲ್ಲಿ ಸಂಚರಿಸುವ ಪ್ರಯಾಣಿಕರಿಗೆ ರಸ್ತೆಯ ಬಿಸಿ ವಾಹನ ಪ್ರಯಾಣಿಕರಿಗೆ ಸುಡುವ ಅನುಭವ ನೀಡಿದೆ.ನಿವಾಸಗಳಲ್ಲಿ ಹಗಲು ರಾತ್ರಿ ಫ್ಯಾನ್ ಗಳು ನಿರಂತರವಾಗಿ ಓಡುತ್ತಿದ್ದರು, ತಂಪು ನೀಡಲು ಸಫಲವಾಗಿಲ್ಲ. ಫ್ಯಾನ್ ಗಳ ನಿರಂತರ ಬಳಕೆಯಿಂದ ಗೃಹ ಜ್ಯೋತಿ ಲಿಮಿಟ್ ದಾಟಿ, ದುಬಾರಿ ಕರೆಂಟ್ ಬಿಲ್ ಬರುತ್ತದೆ ಎಂದು ವಿದ್ಯುತ್ ಗ್ರಾಹಕರು ಚಿಂತೆ ವ್ಯಕ್ತಪಡಿಸಿದ್ದಾರೆ.