ಸಾಹಿತ್ಯ ಒಂದು ಅನಾವರಣ ಕಲೆ: ಪ್ರೊ.ಡಿ. ಯೋಗಾನಂದರಾವ್
Dec 14 2023, 01:30 AM ISTಸಾಹಿತ್ಯಾಸಕ್ತಿ, ಅಧ್ಯಯನ, ಕುತೂಹಲ, ವಿಶ್ಲೇಷಣೆ, ಅನುಭವ, ಬರೆವಣಿಗೆ, ಸಾಹಿತ್ಯ ಪ್ರವೃತ್ತಿಗಳ ಸ್ವೀಕಾರ ಜಗತ್ತಿನೆಡೆಗೆ ಮಾನವನನ್ನು ಕೊಂಡೊಯ್ಯುತ್ತದೆ. ಮಾನವ ಭಾವನೆಗಳ ಸಂಗಮವಾಗಿ ಸಾಹಿತ್ಯ ಕಲೆಯ ಅನಾವರಣವಾಗುತ್ತದೆ ಎಂದು ಬೆಂಗಳೂರಿನ ಸೇಂಟ್ ಜೋಸೆಪ್ ಕಾಲೇಜಿನ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ. ಯೋಗಾನಂದರಾವ್ ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಬುಧವಾರ ಆಯೋಜಿಸಿದ್ದ ‘ಸಾಹಿತ್ಯ ಎಂದರೇನು? ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.