ವಿದ್ಯಾರ್ಥಿಗಳು ಸಾಹಿತ್ಯ ಓದಲಿ- ಕವಿ ರಮೇಶ ಬನ್ನಿಕೊಪ್ಪ
Dec 18 2023, 02:00 AM ISTಕನ್ನಡ ನಾಡು ನುಡಿ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಸಾಹಿತ್ಯದ ಪಾತ್ರ ಬಹುದೊಡ್ಡದು. ಯಾರು ಸಾಹಿತ್ಯವನ್ನು ಪ್ರೀತಿಸುತ್ತಾರೋ ಅವರು ಬದುಕನ್ನು ಪ್ರೀತಿಸುತ್ತಾರೆ. ಸಮಾಜದಲ್ಲಿ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು, ಹೃದಯ ಹೃದಯಗಳನ್ನು ಬೆಸೆಯುವಂತೆ ಮಾಡುವ ಸಾಮರ್ಥ್ಯ ಸಾಹಿತ್ಯಕ್ಕಿದೆ. ಒಡೆದ ಮನಸ್ಸುಗಳನ್ನು ಒಂದುಗೂಡಿಸಿ ಸೌಹಾರ್ದಯುತ ಸಮಾಜ ನಿರ್ಮಾಣ ಮಾಡಬೇಕಾದರೆ ಸಾಹಿತ್ಯದ ಓದು ಅಗತ್ಯ