ಬ್ಲಾಕ್ ಕಾಂಗ್ರೆಸ್ನಿಂದ ಮಾಜಿ ಸಿಎಂ ಕೃಷ್ಣ ನಿಧನಕ್ಕೆ ಸಂತಾಪ
Dec 12 2024, 12:33 AM ISTಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನಕ್ಕೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅಜಾತಶತ್ರು, ನೇರನುಡಿಯ ನಾಯಕ ಎಲ್ಲಾ ಪಕ್ಷದ ಹಿರಿಯ ಮುತ್ಸದ್ಧಿಗಳ ಜೊತೆ ಒಡನಾಟ ಹಾಗೂ ಉತ್ತಮ ಸ್ನೇಹ ಭಾಂದವ್ಯ ಹೊಂದಿದ್ದ ಸ್ವಚ್ಛ ರಾಜಕಾರಣಿ ಅಗಲಿರುವುದು ಕೇವಲ ರಾಜ್ಯಕ್ಕೆ ಮಾತ್ರವಲ್ಲದೆ ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಹಲವಾರು ಮೈಲುಗಲ್ಲನ್ನು ಕಂಡರೂ ಅವರ ಉತ್ರಮ ಆಡಳಿತದ ಮೂಲಕ ರಾಜ್ಯದ ಜನತೆಗೆ ಮನಸಿನಲ್ಲಿ ಉಳಿದಿದ್ದಾರೆ.