ಗುರುಕುಲ ಶಾಲೆ ಸೃಜನ, ಮಿನಾಲ್‌ಗೆ ಸಿಎಂ ಗೌರವ
Nov 15 2024, 12:37 AM ISTಬೆಂಗಳೂರಿನಲ್ಲಿ ಗುರುವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ 2024- 2025ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿನ್ನೆಲೆ ದಾವಣಗೆರೆಯ ಪ್ರತಿಷ್ಠಿತ ಗುರುಕುಲ ವಸತಿಯುತ ಶಾಲೆ ವಿದ್ಯಾರ್ಥಿನಿಯರಾದ ಬಿ. ಸೃಜನ, ಮಿನಾಲ್ ಮುಖ್ಯಮಂತ್ರಿ ಅವರಿಂದ ಗೌರವ ಸನ್ಮಾನಕ್ಕೆ ಪಾತ್ರರಾದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.