‘ನಾನು ಕುಟ್ತಾಲೇ ಇರ್ತೀನಿ. ಈಗಲೂ ಕುಟ್ತೀನಿ ನೋಡಿ, ಕುಟ್ತಾಲೇ ಇರೋದು ಅಭ್ಯಾಸ ಅಷ್ಟೇ....’
ಹೀಗೆಂದು ತಮ್ಮ ಮುಂದಿದ್ದ ಮೇಜನ್ನು ಮೂರು ಬಾರಿ ಜೋರಾಗಿ ಕುಟ್ಟಿದವರು ನಮ್ಮ ಖಡಕ್ ಮುಖ್ಯಮಂತ್ರಿ ಸಿದ್ದರಾಮಯ್ಯ.
ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಗಳಿಸಿದ್ದು ಈ ವಿಜಯೋತ್ಸವದ ಪಾಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲ್ಲುತ್ತದೆ ಎಂದು ಆಹಾರ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
‘ಈ ಫಲಿತಾಂಶ ನನ್ನ ಪಾಲಿಗೆ ಮಹತ್ವದ್ದಾಗಿತ್ತು. ದ್ವೇಷ ಸಾಧನೆಗಾಗಿ ಸುಳ್ಳು ಪ್ರಕರಣ, ಅಪಪ್ರಚಾರದಿಂದ ನನ್ನ ಹಾಗೂ ನನ್ನ ಕುಟುಂಬವನ್ನು ಕಟ್ಟಿಹಾಕಲು ರಾಜಭವನದಿಂದ ಕೇಂದ್ರ ತನಿಖಾ ಸಂಸ್ಥೆಗಳವರೆಗೆ ಎಲ್ಲವನ್ನೂ ದುರ್ಬಳಕೆ ಮಾಡಿಕೊಂಡ ಬಿಜೆಪಿ, ಜೆಡಿಎಸ್‌ನವರಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ.’
ಉಪ ಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದ ತಕ್ಷಣದ ಪರಿಣಾಮವೆಂದರೆ ಸದ್ಯಕ್ಕಾದರೂ ಮುಖ್ಯಮಂತ್ರಿ ಬದಲಾವಣೆ ಎಂಬ ವಿಚಾರ ತೆರೆಮರೆಗೆ ಸರಿಯಲಿದೆ.
ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಅಡಳಿತಕ್ಕೆ ಜನರು ಕೊಟ್ಟ ತೀರ್ಪು ಇದಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ (ಬಿಜೆಪಿ, ಶಿಂಧೆಯ ಶಿವಸೇನೆ, ಅಜಿತ್‌ರ ಎನ್‌ಸಿಪಿ) ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆ ಇದೀಗ ಸಿಎಂ ಗದ್ದುಗೆಗೆ ಏರುವವರು ಯಾರು ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ.