ನಗರದಲ್ಲಿ ಸ್ಟಾರ್ಟ್ಅಪ್ ನಡೆಸುತ್ತಿರುವ ಅಮೆರಿಕ ಪ್ರಜೆ ಟೋನಿ ಕ್ಲೋರ್ ಎಂಬುವರು ಜಿಬಿಎ ಪೌರ ಕಾರ್ಮಿಕನಂತೆ ವಸ್ತ್ರ ಧರಿಸಿ ಕೈಯಲ್ಲಿ ಪೊರಕೆ ಹಿಡಿದು ರಸ್ತೆಯನ್ನು ಗುಡಿಸುವ ಮೂಲಕ ನಗರದ ರಸ್ತೆ, ಫುಟ್ಪಾತ್ ಮತ್ತು ಕಸದ ಅದ್ವಾನ, ಅವಾಂತರದ ಕುರಿತು ಬೆಳಕು ಚೆಲ್ಲಿದ್ದಾನೆ.
ಸಿಎಂ ಕಾರಲ್ಲಿ ರವಿಕುಮಾರ್ ಕೂತಿದ್ದು ಅಪರಾಧವೇ ? - ಆತುರಗಾರನ ಬುದ್ಧಿಮಟ್ಟ ಅನ್ನುವ ಮಾತಿದೆ. ಯಾಕೆ ಹೀಗೆ ಹೇಳಿದೆ ಅಂದರೆ, ವಿಧಾನಪರಿಷತ್ ಮುಖ್ಯ ಸಚೇತಕರಾಗಿರುವ ಎನ್.ರವಿಕುಮಾರ್ ಅವರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸ್ವಪಕ್ಷೀಯರಿಂದಲೇ ಅನೇಕ ಟೀಕೆ- ಟಿಪ್ಪಣಿಗಳು ಬರುತ್ತಿರುವುದಕ್ಕೆ.
‘ಎನ್ಡಿಎ ವಿಕಾಸವನ್ನು ಪ್ರತಿನಿಧಿಸಿದರೆ, ಜಂಗಲ್ ರಾಜ್ ನಾಯಕರು (ಆರ್ಜೆಡಿ) ವಿನಾಶವನ್ನು ಪ್ರತಿನಿಧಿಸುತ್ತಾರೆ. ಅವರು ಮಾಡಿದ ಪಾಪಕ್ಕೆ ಶಿಕ್ಷೆಯನ್ನು ಅನುಭವಿಸಲೇಬೇಕು. ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಸೋಲಿಸಿ, ಶಿಕ್ಷಿಸುವ ಸಮಯ ಬಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ
ಬಿಹಾರ ಚುನಾವಣೆ ಬಳಿಕ ದೆಹಲಿಗೆ ತೆರಳಲಿದ್ದು, ಸಂಪುಟ ಪುನಾರಚನೆ ಕುರಿತು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಚರ್ಚೆ ನಡೆಸುತ್ತೇನೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಸರ್ಕಾರಿ ಭ್ರಷ್ಟ ವ್ಯವಸ್ಥೆ ಮೇಲಿನ ಕಣ್ಗಾವಲು ಬಿಗಿಗೊಳಿಸಿರುವ ಲೋಕಾಯುಕ್ತ ಪೊಲೀಸ್ ಘಟಕ, ಇದೀಗ ಪ್ರತಿ ಇಲಾಖೆಯಲ್ಲಿ ನುಂಗಣ್ಣರ ಪತ್ತೆಗೆ ಎಸ್ಪಿಗಳ ಉಸ್ತುವಾರಿಯಲ್ಲಿ ಡಿವೈಎಸ್ಪಿ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿದೆ.
ಬಿಗ್ ಬಾಸ್ ಸಿಂಹಿಣಿಯ ಹೊಸ ಸಾಹಸ - 777 ಚಾರ್ಲಿ ಚಿತ್ರದ ಸಕ್ಸಲ್ಫುಲ್ ನಟಿ, ಬಿಗ್ಬಾಸ್ ಶೋನಲ್ಲಿ ಸಿಂಹಿಣಿ ಎಂದೇ ಜನಪ್ರಿಯರಾದ ಸಂಗೀತಾ ಶೃಂಗೇರಿ ಈಗೇನು ಮಾಡುತ್ತಿದ್ದಾರೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ.
1983ರಲ್ಲಿ ಕಪಿಲ್ ಡೆವಿಲ್ಸ್ ವಿಶ್ವಕಪ್ ಗೆದ್ದಿದ್ದು, ಭಾರತದಲ್ಲಿ ಪುರುಷರ ಕ್ರಿಕೆಟ್ನ ದಿಕ್ಕು ಬದಲಿಸಿತ್ತು. ಭಾರತದಲ್ಲಿ ಮಹಿಳಾ ಕ್ರಿಕೆಟ್ಗೆ ಆ ಕ್ಷಣ ಕೊನೆಗೂ ಬಂದಿದೆ. ಭಾರತ ಮಹಿಳೆಯರ ಐದು ದಶಕಗಳ ತಪಸ್ಸು, ಕೋಟ್ಯಂತರ ಅಭಿಮಾನಿಗಳ ಹಾರೈಕೆಗೆ ಈಗ ಫಲ ಸಿಕ್ಕಿದೆ.
ರಾಷ್ಟ್ರ ನಿರ್ಮಾಣಕ್ಕೆ ಎಂಎಸ್ಎಂಇ, ಸ್ಟಾರ್ಟ್ಅಪ್ ಕೊಡುಗೆ ,7.34 ಕೋಟಿಗೂ ಹೆಚ್ಚು ಸಂಖ್ಯೆಯಲ್ಲಿರುವ ಎಂಎಸ್ಎಂಇಗಳು ಸುಮಾರು 26 ಕೋಟಿ ವ್ಯಕ್ತಿಗಳಿಗೆ ಉದ್ಯೋಗ ನೀಡುತ್ತಿದ್ದು, ಉದ್ಯಮಶೀಲತೆ, ನಾವೀನ್ಯತೆ ಮತ್ತು ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುವಲ್ಲಿ ಈ ವಲಯ ನಿರ್ಣಾಯಕ ಪಾತ್ರ ವಹಿಸುತ್ತದೆ.
ಮಂಗಳೂರಿನ ಪ್ರಶಸ್ತಿ ವಿಜೇತ ಕ್ರೀಡಾಪಟು ವೇದಿಕೆಯ ಮೂಲೆಯಲ್ಲಿದ್ದ ಮೈಸೂರು ಪೇಟಾ ತಲೆಗೇರಿಸಿ, ಹೆಗಲ ಸುತ್ತ ಜರಿ ಶಾಲು, ಹಾರ, ಯಾರಿಗೋ ನೀಡಿದ ಹೂಗುಚ್ಛ ಕೈಯಲ್ಲಿ ಹಿಡಿದು ಪ್ರಶಸ್ತಿ ಪುರಸ್ಕೃತರ ವೇಷ ಧರಿಸಿ ಪ್ರತ್ಯಕ್ಷನಾಗಿದ್ದು ನೋಡಿ ವೇದಿಕೆಯಲ್ಲಿದ್ದ ಎಲ್ಲರೂ ಹುಬ್ಬೇರಿಸಿದರು.
ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. 2028ರ ವರೆಗೂ ಸಿದ್ದರಾಮಯ್ಯ ಅವರೇ ಸಿಎಂ. ಪಕ್ಷಕ್ಕಾಗಿ ದುಡಿದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಮುಂದಿನ ದಿನದಲ್ಲಿ ಸಿಎಂ ಆಗಲಿ ಎನ್ನುವ ಆಸೆ ನನ್ನದು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.