ರಾಜಧಾನಿ ಬೆಂಗಳೂರಿನಲ್ಲಿ 2ನೇ ದಿನವೂ ‘ಕಸ ಸುರಿಯವ ಹಬ್ಬ’ ಮುಂದುವರೆದಿದ್ದು, ನಗರದ ವಿವಿಧ ಭಾಗದಲ್ಲಿ ರಸ್ತೆ ಬದಿ, ಖಾಲಿ ಜಾಗದಲ್ಲಿ ಕಸ ಎಸೆದವರ ಮನೆ ಮುಂದೆ ಕಸ ಸುರಿದು ದಂಡ ವಸೂಲಿ ಮುಂದುವರೆಸಲಾಗಿದೆ.
ಮಹಿಳಾ ಪ್ರಧಾನ ಪ್ಯಾನ್ ಇಂಡಿಯಾ ಸಿನಿಮಾದ ನಾಯಕಿಯಾಗಿ ಕನ್ನಡತಿಯೊಬ್ಬರು ಆಯ್ಕೆಯಾಗಿದ್ದಾರೆ. ಈ ಸಿನಿಮಾದ ಹೆಸರು ‘ಮಹಾಕಾಳಿ’. ಮಹಾಕಾಳಿ ಪಾತ್ರದಲ್ಲಿ ನಟಿಸುತ್ತಿರುವುದು ಭೂಮಿ ಶೆಟ್ಟಿ. ಪ್ರಶಾಂತ್ ವರ್ಮಾ ಬರೆದಿರುವ ಕತೆ ಇರುವ ಸಿನಿಮಾ ಇದು
ಶಶಾಂಕ್ ನಿರ್ದೇಶನ, ಮಂಜುನಾಥ್ ವಿ ಕಂದಕೂರ್ ನಿರ್ಮಾಣ, ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರ ಇಂದು (ಅ.31) ಬಿಡುಗಡೆ . ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕಿ ಮನೀಶಾ ಕಂದಕೂರ್ ಜೊತೆ ಸಂದರ್ಶನ.
2025ರ ಅತೀ ಹೆಚ್ಚಿನ ಗಳಿಕೆಯ ಸಿನಿಮಾ ಎನ್ನುವ ಹೆಗ್ಗಳಿಕೆ ಪಾತ್ರವಾಗಿರುವ ‘ಕಾಂತಾರ 1’ ಕರ್ನಾಟಕದಲ್ಲೇ 250 ಕೋಟಿ ಗಳಿಕೆ ಮಾಡಿದೆ. ಇದೀಗ ಚಿತ್ರತಂಡವು ನವೆಂಬರ್ 1 ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಕಾಂತಾರ 1’ ಚಿತ್ರದ ಟಿಕೆಟ್ ಬೆಲೆ ಕಡಿಮೆ ಮಾಡಿದೆ.
ಕಾಂತಾರ 1 ಬಿಡುಗಡೆಯಾಗಿದ್ದು ಅ.2ರಂದು, ಓಟಿಟಿಗೆ ಬರುತ್ತಿರುವುದು ಅ.31ರಂದು. ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳ ಮೊದಲೇ ಕಾಂತಾರ 1 ಪ್ರೈಮ್ ವೀಡಿಯೋಗೆ ಬಂದಿದೆ. ಅನೇಕ ದೊಡ್ಡ ದೊಡ್ಡ ಸಿನಿಮಾಗಳೆಲ್ಲಾ ಚಿತ್ರಮಂದಿರದಲ್ಲಿ ಬಿಡುಗಡೆಯಾದ ತಿಂಗಳಲ್ಲೇ ಓಟಿಟಿಗೆ ಬಂದಿವೆ. ಯಾಕೆ ಹೀಗಾಗುತ್ತಿದೆ?
ಮಹಿಳಾ ಏಕದಿನ ವಿಶ್ವಕಪ್: ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 339 ರನ್ ಚೇಸ್ ಮಾಡಿ ಗೆದ್ದ ಭಾರತ । 3ನೇ ಬಾರಿ ಫೈನಲ್ಗೆಆಸ್ಟ್ರೇಲಿಯಾ 49.5 ಓವರಲ್ಲಿ 338 ರನ್ಗೆ ಆಲೌಟ್ । 48.3 ಓವರ್ನಲ್ಲಿ ಗೆದ್ದ ಭಾರತ । ಜೆಮಿಮಾ ಔಟಾಗದೆ 127, ಹರ್ಮನ್ಪ್ರೀತ್ 89
ಸರ್ಧಾರ್ ವಲ್ಲಭಬಾಯಿ ಪಟೇಲ್ ಮತ್ತು ಸುಭಾಸ ಚಂದ್ರ ಬೋಸ್ ಇಬ್ಬರೂ ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರು, ಅಪ್ರತಿಮ ದೇಶಭಕ್ತರು. ಇಬ್ಬರೂ ಸ್ವಾತಂತ್ರ್ಯವನ್ನು ಸಾಧಿಸಲು ವಿಭಿನ್ನ ಮಾರ್ಗಗಳನ್ನು ಅನುಸರಿಸಿದರು.
ಅಖಂಡ ಭಾರತದ ಒಗ್ಗೂಡುವಿಕೆಗೆ ಕಾರಣೀಭೂತರಾದ ಭಾರತದ ಸ್ವಾತಂತ್ರ್ಯ ಇತಿಹಾಸದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮ ಶತಾಬ್ಧಿಯ ನೆನಪಿಗಾಗಿ ಈ ಆಚರಣೆಯನ್ನು 2014ರಲ್ಲಿ ಭಾರತ ಸರ್ಕಾರ ಆರಂಭಿಸಿತ್ತು.
ನಗರದ ರಸ್ತೆ, ಖಾಲಿ ಜಾಗ ಮುಂತಾದ ಕಡೆ ಕಸ ಸುರಿಯುವುದನ್ನು ತಡೆಯಲು ಕಸ ಬಿಸಾಡಿದ ಮನೆ ಮುಂದೆ ಕಸ ಸುರಿಯುವ ‘ಕಸ ಸುರಿಯುವ ಹಬ್ಬ’ ಮೂಲಕ ಗುರುವಾರ 218 ಮನೆಗಳ ಮುಂದೆ ಕಸ ಸುರಿದು 2.80 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ.
ಟನಲ್ ರಸ್ತೆ, ಮೇಲ್ಸೇತುವೆ ಯೋಜನೆ, ''''ಬಿ'''' ಖಾತೆಯಿಂದ ''''ಎ'''' ಖಾತೆ ನೀಡುವ ಯೋಜನೆಗಳ ಕುರಿತು ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹಲ್ ಲಾಲ್ ಖಟ್ಟರ್ ಮೆಚ್ಚುಗೆ ವ್ಯಕ್ತಪಡಿಸಿದರು. ನಾವು ರಾಜ್ಯದ ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದೇವೆ. ಎಂದು ಡಿ.ಕೆ.ಶಿವಕುಮಾರ್ ಹೇಳಿದರು.