ಆಪರೇಷನ್ ಸಿಂದೂರದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸಚಿವಾಲಯ ಮತ್ತು ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ‘ಸದಾ ಎಚ್ಚರದಿಂದಿದ್ದು, ಸ್ಪಷ್ಟ ಸಂವಹನವನ್ನು ಮುಂದುವರೆಸಿ’ ಎಂದು ಸೂಚಿಸಿದ್ದಾರೆ.
ಆಪರೇಷನ್ ಸಿಂದೂರದಲ್ಲಿ ಸ್ಕೈಸ್ಟ್ರೈಕರ್ ಡ್ರೋನ್ ಬಳಕೆ । ಅದಾನಿ ಒಡೆತನದ ಆಲ್ಫಾ ಡಿಸೈನ್ಸ್ನಿಂದ ನಿರ್ಮಾಣ
ಇದಕ್ಕಿದೆ ನಿಖರ ಗುರಿ ಗುರುತಿಸಿ ದಾಳಿಯ ಸಾಮರ್ಥ್ಯ । 10 ಕೆ.ಜಿ. ಬಾಂಬ್ ಸಾಗಿಸಬಲ್ಲ ಆತ್ಮಾಹುತಿ ಡ್ರೋನ್
ಪಹಲ್ಗಾಂ ಉಗ್ರರು ನಡೆಸಿದ ನರಮೇಧಕ್ಕೆ ಪ್ರತೀಕಾರವಾಗಿ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಯೋಧರಿಗೆ ಬೆಂಬಲ ಸೂಚಿಸಲು ರಾಜ್ಯ ಕಾಂಗ್ರೆಸ್ ವತಿಯಿಂದ ಶುಕ್ರವಾರ ಬೆಳಗ್ಗೆ 9.30 ಗಂಟೆಗೆ ಬೆಂಗಳೂರಿನಲ್ಲಿ ‘ತಿರಂಗಾ ಯಾತ್ರೆ’ ಹಮ್ಮಿಕೊಳ್ಳಲಾಗಿದೆ.
ಮೂವರು ಕನ್ನಡಿಗರು ಸೇರಿ 26 ಜನರನ್ನು ಬಲಿ ಪಡೆದ ಪಹಲ್ಗಾಂ ನರಮೇಧಕ್ಕೆ ಪತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆ ಮರುದಿನವೇ ಕನ್ನಡಿಗರು ಭರ್ಜರಿ ಹಮ್ಮೆ ಪಡುವಂತಹ ಸಂಗತಿಯೊಂದು ಹೊರಬಿದ್ದಿದೆ.
ಸಚಿವ ಸಂಪುಟ ಸಭೆಯಲ್ಲಿ ಸಚಿವರ ಅಭಿಪ್ರಾಯ ಲಿಖಿತವಾಗಿ ಸಲ್ಲಿಕೆಯಾಗಲಿದ್ದು, ಕೇಂದ್ರ ಸರ್ಕಾರವೂ ಜಾತಿಗಣತಿ ಘೋಷಿಸಿರುವುದರಿಂದ ರಾಜ್ಯದ ಜಾತಿಗಣತಿ ವರದಿ ಭವಿಷ್ಯದ ಬಗ್ಗೆ ಮಹತ್ವದ ಚರ್ಚೆಯಾಗುವ ನಿರೀಕ್ಷೆಯಿದೆ.
ಭಾರತೀಯ ಸೇನೆ ನಡೆಸಿದ ‘ಆಪರೇಶನ್ ಸಿಂಧೂರ್’ಗೆ ಕನ್ನಡ ಚಿತ್ರರಂಗ ಬೆಂಬಲ ವ್ಯಕ್ತಪಡಿಸಿದೆ
ಪಾಕಿಸ್ತಾನ ಉಗ್ರರ ನೆಲಗಳ ಮೇಳೆ ಆಪರೇಷನ್ ಸಿಂದೂರ ಹೆಸರಿನಲ್ಲಿ ನಡೆದ ದಾಳಿಯನ್ನು ಪಹಲ್ಗಾಂನಲ್ಲಿ ಉಗ್ರರಿಂದ ಹತ್ಯೆಗೊಳಗಾದ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ ತಾಯಿ ಸುಮತಿ ಅವರು ಸ್ವಾಗತಿಸಿದ್ದಾರೆ.
ಅಡಗಿರುವ ಇನ್ನಷ್ಟು ಉಗ್ರರನ್ನು ಹೊಡೆಯಬೇಕು ಎಂದು ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟ ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ ಅವರ ತಂದೆ ಚನ್ನವೀರಪ್ಪ ಹೇಳಿದರು.
''ಆಪರೇಷನ್ ಸಿಂದೂರ'' ಬಗ್ಗೆ ಸೇನಾಪಡೆಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಮೆಚ್ಚುಗೆ ತಿಳಿಸಲು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಂದೂರ ಇಟ್ಟು ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು.
ಕಾಶ್ಮೀರದ ಪಹಲ್ಗಾಂನಲ್ಲಿ 26 ಹಿಂದೂ ಪ್ರವಾಸಿಗರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಭಾರತದ ಸೇನೆ ಪಾಕಿಸ್ತಾನದ ಉಗ್ರಗಾಮಿಗಳ ಬಂಕರ್ಗಳ ಮೇಲೆ ‘ಸಿಂದೂರ’ ಕಾರ್ಯಾಚರಣೆಗೆ ರಾಜ್ಯಾದ್ಯಂತ ನಾಗರಿಕರು, ವಿವಿಧ ಪಕ್ಷಗಳು, ಸಂಘ ಸಂಸ್ಥೆಗಳು ಸಂಭ್ರಮಿಸಿವೆ.