ಒಂದು ದಿನದ ಮಟ್ಟಿಗೆ ಟ್ರಾಫಿಕ್ ಪೊಲೀಸ್ ಆಗಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರು ಮಂಗಳವಾರ ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.ಬೆಂಗಳೂರು ಸಂಚಾರ ಪೊಲೀಸರು ಸಾರ್ವಜನಿಕರಿಗೆ ಒಂದು ದಿನದ ಮಟ್ಟಿಗೆ ಸಂಚಾರ ಪೊಲೀಸ್ ಆಗುವ ಅವಕಾಶವನ್ನು ನಾಗರಿಕರಿಗೆ ಕಲ್ಪಿಸಿದ್ದರು
ಬೀದರ್ ಜಿಲ್ಲಾ ಪಂಚಾಯತ್ಗೆ ರಾಷ್ಟ್ರೀಯ ಜಲ ಸಂಚಯ-ಜನ್ ಭಾಗಿದಾರಿ ಪ್ರಶಸ್ತಿ ದೊರೆತಿದೆ. ‘ಅತ್ಯುತ್ತಮ ಪ್ರದರ್ಶನ ಜಿಲ್ಲೆ’ ಎಂಬ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಬೀದರ್ ಜಿಲ್ಲೆಯೂ ರಾಜ್ಯಕ್ಕೆ ಹೆಮ್ಮೆ ತಂದಿದೆ.
ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ಜಗತ್ತು ಎದುರಿಸುತ್ತಿದೆ. ಈ ಕಾಲಘಟ್ಟದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಸುಸ್ಥಿರ ಅಭಿವೃದ್ಧಿಯತ್ತ ಸಾಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.
ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು. ಅಲ್ಲಿ ಅಂತಹ ಅನಿವಾರ್ಯತೆ ಇತ್ತು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ್ ಬಿಳಿಮಲೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪರಿಸರ ನಿಯಮ ಉಲ್ಲಂಘಿಸಿ ನಿರ್ಮಾಣವಾಗುವ ಯೋಜನೆಗಳಿಗೆ, ನಂತರದ ದಿನಗಳಲ್ಲಿ ದಂಡಸಹಿತವಾಗಿ ಅನುಮತಿ ನೀಡುವ ಕೇಂದ್ರ ಸರ್ಕಾರದ ಕ್ರಮವನ್ನು ಮೇ 16ರ ತೀರ್ಪಿನಲ್ಲಿ ಸುಪ್ರೀಂ ನಿರ್ಬಂಧಿಸಿತ್ತು. ಆದರೆ ಈಗ ತೀರ್ಪನ್ನು ಸುಪ್ರೀಂ ಕೋರ್ಟ್ ಹಿಂಪಡೆಯಲು ನಿರ್ಧರಿಸಿದೆ.
ಮಗುವಿನ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಇಂದಿನ ಪೋಷಕರ ಪ್ರಮುಖ ಆದ್ಯತೆ. ವಿಶೇಷವಾಗಿ ಶಿಕ್ಷಣ, ಆರೋಗ್ಯ ಮತ್ತು ಉನ್ನತ ಅಧ್ಯಯನಗಳಂತಹ ಪ್ರಮುಖ ವೆಚ್ಚಗಳನ್ನು ಸರಿದೂಗಿಸಲು ಹೂಡಿಕೆ ಅನಿವಾರ್ಯ. ಸರ್ಕಾರಿ ಬೆಂಬಲಿತ, ಮಾರ್ಕೆಟ್ ಲಿಂಕಿನ ಪ್ಲಾನ್ಗಳ ತನಕ ಮಕ್ಕಳಿಗಾಗಿ ಹಲವು ಹೂಡಿಕೆ ಯೋಜನೆಗಳಿವೆ
ಬಿಹಾರದಲ್ಲಿ ನೂತನ ಸರ್ಕಾರದ ಪ್ರಮಾಣವಚನ ಸಮಾರಂಭ ನ.20ರಂದು ಪಟನಾದಲ್ಲಿ ನಡೆಯುವ ಸಾಧ್ಯತೆಯಿದೆ. ಈ ಸಂಬಂಧ ನಗರದ ಗಾಂಧಿ ಮೈದಾನದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು. ಆಗಲೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನುಗ್ಗಲು ಸಾಧ್ಯ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹಿಂದೊಮ್ಮೆ ಹೇಳಿದ್ದರು. ಯುವ ಸಮುದಾಯಗಳ ಆಕ್ರೋಶದ ನಡುವೆಯೂ ಅವರು ಅದನ್ನು ಸಮರ್ಥಿಸಿಕೊಂಡಿದ್ದರು.
ಕಾರ್ ಎಂಬುದು ಮಧ್ಯಮವರ್ಗದ ಕನಸು. ಸಾಕಾರಕ್ಕಾಗಿ ಎಷ್ಟೋ ಜನ ವರ್ಷಗಳ ಕಾಲ ಕೂಡಿಟ್ಟು, ಖರೀದಿಸುತ್ತಾರೆ. ಆದರೆ ಶ್ರೀಮಂತರ ಪ್ರಪಂಚದಲ್ಲಿ ಕಾರ್ ಎಂಬುದು ಪ್ರತಿಷ್ಠೆಯ ಸಂಕೇತ. ತಾವು ಕುಳಿತ ವಾಹನ ಅರಮನೆಯಷ್ಟು ಆರಾಮದಾಯಕವಾಗಿರಬೇಕು, ಎಲ್ಲರೂ ಒಂದು ಕ್ಷಣ ತಿರುಗಿ ನೋಡಬೇಕು ಎಂಬ ಹಂಬಲ
ಖ್ಯಾತ ನಟಿ, ಮಾಜಿ ಸಂಸದೆ ರಮ್ಯಾ ಅವರು ಮದುವೆ ಆಗುವ ಆಸೆ ವ್ಯಕ್ತ ಪಡಿಸಿ ಅಚ್ಚರಿ ಮೂಡಿಸಿದ್ದಾರೆ. ಶಿವರಾಜ್ ಕುಮಾರ್ ದಂಪತಿ ಜೊತೆ ವಿದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ‘ಸ್ನೇಹಮಯಿ ವ್ಯಕ್ತಿತ್ವದ ಹುಡುಗ ಸಿಕ್ಕರೆ ಮದುವೆ ಆಗಬೇಕು ಅನಿಸುತ್ತದೆ’ ಎಂದು ಹೇಳಿದ್ದಾರೆ.