ದೇಶದ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಕೇರಳ ಮತ್ತೊಂದು ಸಾಕ್ಷರತೆ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸಿದೆ. ಹಿರಿಯ ನಾಗರಿಕರಿಗೆ ಮೊಬೈಲ್ ಮತ್ತು ಆನ್ಲೈನ್ ಜ್ಞಾನವನ್ನು ಕಲಿಸಲು ಅಲ್ಲಿನ ಸರ್ಕಾರ ಡಿಜಿಟಲ್ ಸಾಕ್ಷರತೆ ಅಭಿಯಾನವನ್ನು ನಡೆಸಿದೆ.
ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ಕೈಗೊಂಡ ಆಪರೇಷನ್ ಸಿಂದೂರದಲ್ಲಿ ಪಾಕಿಸ್ತಾನದ 150ಕ್ಕೂ ಅಧಿಕ ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ರಹಸ್ಯ ಮಾಹಿತಿಯನ್ನು ಸ್ವತಃ ಪಾಕ್ನ ಸಮಾ ಟಿವಿ ಪ್ರಕಟಿಸಿದೆ.
ಕ। ಸೋಫಿಯಾ ಖುರೇಶಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕಮಾಂಡರ್ ಪ್ರೇರಣಾ ದೇವಸ್ಥಾಲಿ ಅವರು ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದಲ್ಲಿ 25 ಲಕ್ಷ ರು.ಬಹುಮಾನ ಗೆದ್ದಿದ್ದಾರೆ.
‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಭಾರತೀಯ ತಾಲಿಬಾನ್’ ಎಂದು ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ.
ತುಂಗಭದ್ರಾ ಬೋರ್ಡ್ನಿಂದಲೇ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಈಗ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿ ವಿಳಂಬವಾಗಲು ಬೋರ್ಡ್ ನೇರ ಹೊಣೆ ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ಮಾಡಿದ್ದಾರೆ.
‘ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ’ ಎಂದು ಅನಾಮಿಕ ವ್ಯಕ್ತಿ ನೀಡಿದ ದೂರಿನ ಮೇರೆಗೆ ನಡೆಯುತ್ತಿರುವ ವಿದ್ಯಮಾನಗಳು ಹಾಗೂ ಧರ್ಮಸ್ಥಳ ಗ್ರಾಮದಲ್ಲಿ ಅಸ್ಥಿಪಂಜರಗಳಿಗಾಗಿ ನಡೆದಿರುವ ಉತ್ಖನನ ಖಂಡಿಸಿ ಬಿಜೆಪಿ ನಾಯಕರು ಭಾನುವಾರ ಧರ್ಮಸ್ಥಳ ಚಲೋ ನಡೆಸಿದರು.
ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಧರ್ಮಸ್ಥಳ ಗ್ರಾಮದ ಅಸ್ಥಿ ಉತ್ಖನನ, ಎಸ್ಐಟಿ ತನಿಖೆ ಪ್ರಗತಿ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಉತ್ತರ ನೀಡಲಿದ್ದಾರೆ.
9 ತಿಂಗಳು ಹೊತ್ತು ಜನ್ಮ ನೀಡಿ, ದೊಡ್ಡವನಾಗುವವರೆಗೆ ಲಾಲನೆ- ಪೋಷಣೆ ಮಾಡುವ ತಾಯಿಯನ್ನು ‘ಸಾಕ್ಷಾತ್ ದೇವರು’ ಎಂದು ಕರೆಯುತ್ತೇವೆ. ಆದರೆ ಅಂತಹ ಹೆತ್ತಮ್ಮನ ಮೇಲೆ ರಾಕ್ಷಸನೊಬ್ಬ ಅತ್ಯಾ*ರವೆಸಗಿರುವ ಅತ್ಯಂತ ಹೇಯ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ ಗೋಲ್ಮಾಲ್ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ಇದೀಗ ಆ ವಿಚಾರವನ್ನು ಇಟ್ಟುಕೊಂಡು ಚುನಾವಣಾ ಆಯೋಗದ ವಿರುದ್ಧ ಸಮರ ಮುಂದುವರಿಸಿದ್ದಾರೆ. ಇದಕ್ಕೆ ಆಯೋಗ ಕೂಡ ತಿರುಗೇಟು ಕೊಟ್ಟಿದೆ.
ಅರಸಿಕರಾದ ಜನದ ಮುಂದೆ ಕಾವ್ಯ ಓದುವ ಹಣೆಬರಹ ಬರೆಯಬೇಡ ಅಂತ ಕವಿಯೊಬ್ಬ ವಿಧಿಯ ಹತ್ತಿರ ಕೇಳಿಕೊಂಡಿದ್ದನಂತೆ. ಕೇಳುಗರು ಕೂಡ ಕೆಟ್ಟ ಕವಿತೆಯನ್ನು ಯಾವತ್ತೂ ಕೇಳಿಸಬೇಡ ಅಂತ ಪ್ರಾರ್ಥಿಸಬಹುದು. ಆದರೆ ಕೆಟ್ಟ ಕಾವ್ಯಕ್ಕೆ ಕೊನೆಯಿಲ್ಲ. ಅನೇಕ ಸಲ ಎಲ್ಲರೂ ಕೆಟ್ಟ ಕವಿತೆಗೆ ಕಿವಿಯೊಡ್ಡಲೇ ಬೇಕು.