ಮೈಕ್ರೋ ಸಾಫ್ಟ್ ಕಂಪನಿಯ ಸೋಗಿನಲ್ಲಿ ಬೆಂಗಳೂರಿನಲ್ಲಿ ಕುಳಿತು ಅಮೆರಿಕಾ ಪ್ರಜೆಗಳು ಸೇರಿ ಇತರೆ ನಾಗರಿಕರನ್ನು ಬೆದರಿಸಿ ವಂಚಿಸುತ್ತಿದ್ದ 21 ಸೈಬರ್ ವಂಚಕರ ಜಾಲವನ್ನು ಬಂಧಿಸಲಾಗಿದೆ. ಸೈಬರ್ ಕಮಾಂಡ್ ಸೆಂಟರ್ ಆರಂಭವಾದ ಮೇಲೆ ಪತ್ತೆ ಹಚ್ಚಿರುವ ಮೊದಲ ಭಾರೀ ಪ್ರಕರಣ ಇದಾಗಿದೆ.
ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ, ನ.17ರಿಂದ ಆರಂಭವಾಗಲಿರುವ ಶಬರಿಮಲೆಯಾತ್ರೆ ಯಾತ್ರಿಕರಿಗೆ ಕೇರಳ ಸರ್ಕಾರವು ಆರೋಗ್ಯ ಮಾರ್ಗದರ್ಶಿ ಬಿಡುಗಡೆ ಮಾಡಿದೆ.
ಬಿಹಾರದಲ್ಲಿ ಆರ್ಜೆಡಿ ಸೋತು ಸುಣ್ಣವಾದ ಬೆನ್ನಲ್ಲೇ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ಗೆ ಮತ್ತೊಂದು ಆಘಾತ ಎದುರಾಗಿದ್ದು, ಪುತ್ರಿ ರೋಹಿಣಿ ಆಚಾರ್ಯ, ರಾಜಕೀಯ ಮತ್ತು ಕುಟುಂಬದೊಂದಿಗಿನ ಸಂಬಂಧ ಕಡಿತಗೊಳಿಸಿ ಕೊಳ್ಳುವುದರ ಬಗ್ಗೆ ಘೋಷಿಸಿದ್ದಾರೆ. ಈ ಮೂಲಕ ಲಾಲು ಕುಟುಂಬದ ಕಲಹ ಮತ್ತೊಮ್ಮೆ ಬೀದಿಗೆ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತಗಳಿಕೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳ(ಆರ್ಜೆಡಿ) ನಂ.1 ಆಗಿದ್ದರೂ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಹೇಗೆ? ಇದಕ್ಕೆ ಉತ್ತರ ಬಿಜೆಪಿ ಮತ್ತು ಆರ್ಜೆಡಿ ಸ್ಪರ್ಧಿಸಿದ ಸ್ಥಾನಗಳ ಸಂಖ್ಯೆಯಲ್ಲಿ ಅಡಗಿದೆ.
ಚೈತ್ರಾ ಆಚಾರ್ ಹಾಗೂ ರಿತ್ವಿಕ್ ಮಠದ್ ನಟನೆಯ ‘ಮಾರ್ನಮಿ’ ಚಿತ್ರ ನ.28ಕ್ಕೆ ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು. ತಮ್ಮದೇ ಊರಿನ ಕತೆಯನ್ನು ನಿರ್ದೇಶ ರಿಶಿತ್ ಶೆಟ್ಟಿ ತೆರೆ ಮೇಲೆ ತಂದಿದ್ದಾರೆ. ಚರಣ್ ರಾಜ್ ಸಂಗೀತ ಗಮನ ಸೆಳೆಯುತ್ತಿದೆ’ ಎಂದರು.
ಪ್ರಹ್ಲಾದ್ ಜೋಷಿ ಸೇರಿ ಬಿಜೆಪಿ-ಜೆಡಿಎಸ್ ಸಂಸದರು ನೀರಾವರಿ, ಹಣಕಾಸು ವಿಚಾರಗಳೂ ಸೇರಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಯಾವ ಅನ್ಯಾಯಗಳ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಒಂದು ದಿನವೂ ಸಂಸತ್ನಲ್ಲಿ ರಾಜ್ಯದ ಪರವಾಗಿ ದನಿ ಎತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ
‘ವೋಟ್ ಚೋರಿ ಎನ್ನುವ ಸುಳ್ಳು ಸಂಕಥನ ಸೃಷ್ಟಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಬಿಹಾರ ಮತದಾರರು ತಕ್ಕಪಾಠ ಕಲಿಸಿದ್ದಾರೆ’ ಎಂದು ಕೆಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಿಹಾರ ಚುನಾವಣೆ ಫಲಿತಾಂಶ ರಾಜ್ಯ ಕಾಂಗ್ರೆಸ್ ಸರ್ಕಾರದ ‘ನವೆಂಬರ್ ಕ್ರಾಂತಿ’ಗೆ ಇಂಬು ನೀಡುತ್ತದೆ ಎಂಬ ನಿರೀಕ್ಷೆ ಸಂಪೂರ್ಣ ಹುಸಿಹೋಗಿದ್ದು, ತೀವ್ರ ಬೆಳವಣಿಗೆ ಬಯಸುತ್ತಿದ್ದವರ ಉತ್ಸಾಹಕ್ಕೆ ಭಂಗ ಬಂದಿದೆ. ತನ್ಮೂಲಕ ರಾಜ್ಯ ಕಾಂಗ್ರೆಸ್ ವಲಯದಲ್ಲಿ ನಿಗೂಢ ಮೌನ ಆವರಿಸಿದೆ ಎನ್ನುತ್ತವೆ ಮೂಲಗಳು.
ಸಾಲು ಮರದ ತಿಮ್ಮಕ್ಕ ನಿಧನಕ್ಕೆ ಕೇಂದ್ರದ ಮಾಜಿ ಸಚಿವ, ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನನ್ನ ಹಿರೋಗಳಲ್ಲಿ ಒಬ್ಬರಾದ ಸಾಲುಮರದ ತಿಮ್ಮಕ್ಕ ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆ ಎಂದರು
ಬಿಹಾರದಲ್ಲಿ ಎನ್ಡಿಎ ಗೆಲುವಿನ ತೇರನ್ನೆಳೆದದ್ದು, ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದ ಭರವಸೆಗಳು. , ಸ್ತ್ರೀ ಕೇಂದ್ರಿತವಾಗಿದ್ದ ಹಲವು ಗ್ಯಾರಟಿಗಳಿಂದಾಗಿ ಮಹಿಳಾ ಮತಗಳು ಭಾರೀ ಪ್ರಮಾಣದಲ್ಲಿ ಎನ್ಡಿಎ ಪಾಲಾಗಿವೆ. ಈ ಬಾರಿ ಚಲಾವಣೆಯಾದ ಮತಗಳಲ್ಲಿ ಶೇ.71.78ರಷ್ಟು ಪಾಲು ಮಹಿಳೆಯರದ್ದು ಎಂಬುದು ಗಮನಾರ್ಹ.