ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಶುಕ್ರವಾರ ಬಾಗಲಕೋಟೆ ಜಿಲ್ಲೆಯಲ್ಲಿದ್ದ ಶ್ರೀಗಳಿಗೆ ತಕ್ಷಣವೇ ಜಿಲ್ಲೆ ತೊರೆಯುವಂತೆ ಜಿಲ್ಲಾಧಿಕಾರಿ ಸಂಗಪ್ಪ ಆದೇಶ
ಖಾಸಗಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಪ್ರಯಾಣಿಕರು ನಿಲ್ಲಿಸುವಂತೆ ಕೇಳಿದರೂ ಉದ್ಧಟತನದಿಂದ ಚಾಲಕ ಬಸ್ ನಿಲ್ಲಿಸದೇ ಚಲಾಯಿಸಿದ್ದರಿಂದ ಬಸ್ ಸಮೇತ 36 ಪ್ರಯಾಣಿಕರ ದಾಖಲೆಗಳು, ಬ್ಯಾಗ್ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಗುರುಮಠಕಲ್ನ ರೈಸ್ ಮಿಲ್ ಗಳಲ್ಲಿ ಪತ್ತೆಯಾದ ಅನ್ನಭಾಗ್ಯ ಅಕ್ಕಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ವೇಳೆ ಸಿಕ್ಕ ಡೈರಿಯೊಂದರಲ್ಲಿನ ಬರೆದಿಟ್ಟಿರುವ ಅಂಶಗಳು ಲಂಚಾವತಾರದ ರಹಸ್ಯಗಳನ್ನು ಬಯಲಾಗಿಸಲಿವೆ.
ಆರ್ಸಿಬಿ ಖರೀದಿಗೆ ಸಿದ್ಧ ಎನ್ನುವ ಅರ್ಥದಲ್ಲಿ ಮಾಡಿದ್ದ ಟ್ವೀಟ್ ಭಾರೀ ವೈರಲ್ ಆಗಿತ್ತು. ಇದೀಗ, ಆರ್ಸಿಬಿ ಖರೀದಿಗೆ ಬರೀ ಪೂನಾವಾಲಾ ಮಾತ್ರವಲ್ಲ, ಅವರನ್ನೂ ಸೇರಿ ಒಟ್ಟು 6 ಸಂಸ್ಥೆಗಳು ಆಸಕ್ತಿ ತೋರಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಗುಜರಾತ್ನ ಭೂಪೇಂದ್ರ ಪಟೇಲ್ ನೇತೃತ್ವದ ಸಚಿವ ಸಂಪುಟದ 16 ಸಚಿವರು ಗುರುವಾರ ರಾಜೀನಾಮೆ ನೀಡಿದ ಬೆನ್ನಲ್ಲೇ, ಶುಕ್ರವಾರ 26 ಸಚಿವರನ್ನೊಳಗೊಂಡ ನೂತನ ಸಂಪುಟವನ್ನು ಪುನಾರಚಿಸಲಾಗಿದೆ.
ಇತ್ತೀಚೆಗೆ ನೇಪಾಳದಲ್ಲಿ ಜೆನ್ ಝೀಗಳಿಂದ ನಡೆದ ದಂಗೆಯ ನೆನಪು ಮಾಸುವ ಮುನ್ನವೇ ಆಫ್ರಿಕಾದ ದ್ವೀಪರಾಷ್ಟ್ರ ಮಡಗಾಸ್ಕರ್ನಲ್ಲೂ ಯುವಸಮುದಾಯದ ಪ್ರತಿಭಟನೆಯಿಂದಾಗಿ ಕ್ಷಿಪ್ರಕ್ರಾಂತಿ ನಡೆದಿದೆ.
ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳ ಚಿನ್ನಲೇಪಿತ ತಾಮ್ರದ ಕವಚದಲ್ಲಿನ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಬೆಂಗಳೂರಿನ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಶುಕ್ರವಾರ ಬಂಧಿಸಿದೆ
ಇಂದು ಜಗತ್ತು ಹಲವಾರು ರಸ್ತೆತಡೆ, ವೇಗಪ್ರತಿಬಂಧಕಗಳನ್ನು ಹೊಂದಿದೆ. ಆದರೆ ಭಾರತ ನಿಲ್ಲುವ ಮನಃಸ್ಥಿತಿಯಲ್ಲಿಲ್ಲ. ಅದು ನಿಲ್ಲುವುದೂ ಇಲ್ಲ, ನಿಧಾನವಾಗುವುದೂ ಇಲ್ಲ. 140 ಕೋಟಿ ಭಾರತೀಯರು ಪೂರ್ಣ ಆವೇಗದೊಂದಿಗೆ ಒಟ್ಟಾಗಿ ಮುಂದೆ ಸಾಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ
ನಕ್ಸಲ್ ಪೀಡಿತ ಛತ್ತೀಸ್ಗಢದಲ್ಲಿ ಒಂದೇ ದಿನ ಬರೋಬ್ಬರಿ 210 ಮಾವೋವಾದಿಗಳು ಶಸ್ತ್ರಾಸ್ತ್ರ ತ್ಯಜಿಸಿ ಪೊಲೀಸರಿಗೆ ಶರಣಾಗಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ಏಕದಿನದ ಅತಿದೊಡ್ಡ ನಕ್ಸಲ್ ಶರಣಾಗತಿ. ಈ ಮೂಲಕ ಕಳೆದ 3 ದಿನದಲ್ಲಿ ಶರಣಾದ ನಕ್ಸಲರ ಸಂಖ್ಯೆ 238ಕ್ಕೇರಿಕೆಯಾಗಿದೆ
ತನ್ನ ಸಹಪಾಠಿಯನ್ನು ಕಾಲೇಜಿನ ಪುರುಷರ ಶೌಚಾಲಯಕ್ಕೆ ಕರೆದೊಯ್ದು ಅತ್ಯಾ*ರ ಎಸಗಿದ ಆರೋಪದ ಮೇರೆಗೆ ನಗರದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನ 7ನೇ ಸೆಮಿಸ್ಟರ್ ವಿದ್ಯಾರ್ಥಿಯೊಬ್ಬನನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.