ಬ್ಯಾಂಕ್ ಆಫ್ ಬರೋಡಾ ಬಿಸಿನೆಸ್ ಕರೆಸ್ಟಾಂಡೆಂಟ್ನಿಂದ ವೃದ್ಧನಿಗೆ ವಂಚನೆವೃದ್ಧ ರಂಗಣ್ಣ ಅವರ ಆಧಾರ್ ನಂಬರ್ ಮೂಲಕ ಹೆಬ್ಬೆಟ್ಟಿನಿಂದ 2400 ರು. ಹಣ ಡ್ರಾ ಮಾಡಿಕೊಂಡು ಕೇವಲ ಒಂದು ತಿಂಗಳ 1200 ರು. ಮಾತ್ರ ಬಂದಿದೆ. ನಾಳೆ ಬನ್ನಿ ಬ್ಯಾಂಕ್ನಿಂದ ಡ್ರಾ ಮಾಡಿ ನಿಮಗೆ ಕೊಡುತ್ತೇನೆ ಎಂದು ಹೇಳಿದ್ದಾನೆ. ಗ್ರಾಮದ ಇತರರಿಗೆ ಎರಡು ತಿಂಗಳ ಹಣ ಬಂದಿದೆ. ನನಗೂ ಬಂದಿರಬಹುದು ಸರಿಯಾಗಿ ನೋಡಿ ಎಂದು ಕೇಳಿಕೊಂಡರೂ ನಿಮ್ಮ ಬಳಿ ಕೇವಲ 1200 ರು. ಮಾತ್ರ ಇದೆ ಎಂದು ಕೊಟ್ಟು ಕಳುಹಿಸಿದ್ದಾನೆ.