ದುಷ್ಕರ್ಮಿಗಳಿಂದ ಗುಡಿಸಲಿಗೆ ಬೆಂಕಿ; ಇಬ್ಬರು ಪ್ರಾಣಾಪಾಯದಿಂದ ಪಾರು..!ದುಷ್ಕರ್ಮಿಗಳು ಹಚ್ಚಿದ ಬೆಂಕಿಯಿಂದ ವಾಸದ ಗುಡಿಸಲು ಸಂಪೂರ್ಣ ಬೂದಿಯಾಗಿ, ಇಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬುಯ್ಯನದೊಡ್ಡಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಗ್ರಾಮದ ಮರೀಗೌಡ ಹಾಗೂ ಗುರುವಮ್ಮ ಅವರಿಗೆ ಸೇರಿದ ಗುಡಿಸಲು ಬೆಂಕಿಗಾಹುತಿಯಾಗಿದೆ.