200ಕ್ಕೂ ಅಧಿಕ ಸ್ವತ್ತುಗಳಿಗೆ ನಕಲಿ ‘ಎ’ ಖಾತೆ ಸೃಷ್ಟಿ: ಓರ್ವ ಅಧಿಕಾರಿ ಬಂಧನನಕಲಿ ದಾಖಲೆ ಸೃಷ್ಟಿಸಿ 200ಕ್ಕೂ ಅಧಿಕ ಸ್ವತ್ತುಗಳಿಗೆ ‘ಎ’ ಖಾತಾ ಮಾಡುವ ಮೂಲಕ ಬಿಬಿಎಂಪಿಗೆ ಅಭಿವೃದ್ಧಿ ಶುಲ್ಕದ ರೂಪದಲ್ಲಿ ಬರಬೇಕಿದ್ದ ಕೋಟ್ಯಂತರ ರು. ವಂಚಿಸಿ, ಭ್ರಷ್ಟಾಚಾರ ನಡೆಸಿರುವ ಆರೋಪದಡಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.