ಆಕಸ್ಮಿಕ ಬೆಂಕಿಗೆ ಅಡಿಕೆ, ತೆಂಗಿನ ಸಸಿಗಳು ಸಂಪೂರ್ಣ ನಾಶನಿಡಘಟ್ಟ ಗ್ರಾಮದ ರೈತ ಮಹದೇವೇಗೌಡರು ತಮ್ಮ 3.5 ಎಕರೆ ಪ್ರದೇಶದಲ್ಲಿ ಕಳೆದ ಆರೇಳು ವರ್ಷಗಳ ಹಿಂದೆ 1600 ಅಡಿಕೆ ಮತ್ತು 190 ತೆಂಗಿನ ಗಿಡಗಳನ್ನು ನೆಟ್ಟಿದ್ದರು. ಎಲ್ಲವೂ ಫಸಲು ಬಿಡುವ ಹಂತಕ್ಕೆ ಬಂದಿದ್ದವು. ತೋಟಕ್ಕೆ ಶನಿವಾರ ಸಂಜೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣವಾಗಿ ಗಿಡಗಳು ಸುಟ್ಟು ನಾಶವಾಗಿವೆ. ಹಾಗೇ, ಭತ್ತದ ಹುಲ್ಲಿನ ಮೆದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಮಾರು 5 ಲಕ್ಷಕ್ಕೂ ಹೆಚ್ಚು ನಷ್ಟವಾಗಿರುವ ಘಟನೆ ಮಳವಳ್ಳಿ ಪಟ್ಟಣ ಗಂಗಮತ ಬೀದಿಯ ಕಪ್ಪಡಿಮಾಳದಲ್ಲಿ ನಡೆದಿದೆ.