ವಂಚಕಿ ‘ಬಂಗಾರಿ’ಯ ಜೊತೆ ಇನ್ಸ್ಪೆಕ್ಟರ್ ಗೋವಾ ಟ್ರಿಪ್?ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಮೊಬೈಲ್ ಕರೆಗಳ ವಿವರ (ಸಿಡಿಆರ್) ಪಡೆದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಚಿನ್ನ ವಂಚನೆ ಆರೋಪಿ ಐಶ್ವರ್ಯಾಗೌಡಳ ಜತೆ ಖಾಕಿ ನಂಟಿನ ರೋಚಕ ಸಂಗತಿ ಬಯಲಾಗುತ್ತಿದ್ದು, ಈಗ ಆಕೆ ಜತೆ ನಗರದ ಇನ್ಸ್ಪೆಕ್ಟರ್ವೊಬ್ಬರು ಗೋವಾ ಪ್ರವಾಸಕ್ಕೆ ಹೋಗಿದ್ದರು ಎಂಬ ಮಾತುಗಳು ಕೇಳಿ ಬಂದಿವೆ.