ಸೇನೆಯ ಮೂರೂ ವಿಭಾಗಗಳ ಸಂಯೋಜಿತ ಸೇನಾ ಕಮಾಂಡ್ ಕನಸು ಶೀಘ್ರ ನನಸು : ರಕ್ಷಣಾ ಇಲಾಖೆಸೇನೆಯ ಮೂರೂ ವಿಭಾಗಗಳ ಸಾಮರ್ಥ್ಯವನ್ನು ಒಗ್ಗೂಡಿಸಿ, ಸೇನೆಯನ್ನು ಯುದ್ಧ ಮತ್ತು ಇತರೆ ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿ ಇಡುವ ‘ಸಂಯೋಜಿತ ಸೇನಾ ಕಮಾಂಡ್’ ವ್ಯವಸ್ಥೆಯ ಕನಸನ್ನು ಈ ವರ್ಷ ಜಾರಿಗೊಳಿಸುವ ವಿಶ್ವಾಸವನ್ನು ರಕ್ಷಣಾ ಇಲಾಖೆ ವ್ಯಕ್ತಪಡಿಸಿದೆ.