ಹೊಸ ವರ್ಷದ ಸತತ 2 ದಿನ ಒಟ್ಟಾರೆ 1804 ಏರಿಕೆ ಕಂಡಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಶುಕ್ರವಾರ 720 ಅಂಕಗಳ ಕುಸಿತ ಕಂಡು 79223ರಲ್ಲಿ ಅಂತ್ಯವಾಗಿದೆ.
ವಂಚಿಸುವ ವ್ಯವಸ್ಥಿತ ಜಾಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಾಚರಿಸುತ್ತಿದ್ದು, ದೇಶದ ಅಸಂಖ್ಯಾತ ನಿರುದ್ಯೋಗಿ ಯುವಜನರು, ಗೃಹಿಣಿಯರು, ವಿದ್ಯಾರ್ಥಿಗಳು, ಮತ್ತಿತರರು ಇವರ ಬಲೆಗೆ ಬಿದ್ದು ನಿತ್ಯ ಭಾರಿ ಮೊತ್ತದ ಹಣ ಕಳೆದುಕೊಳ್ಳುತ್ತಿದ್ದಾರೆಂದು ಕೇಂದ್ರ ಗೃಹ ಇಲಾಖೆಯ ವಾರ್ಷಿಕ ವರದಿಯಲ್ಲಿ ಹೇಳಿದೆ.
ಪ್ರತಿಷ್ಠಿತ ಆನ್ಲೈನ್ ಫುಡ್ ಡೆಲಿವರಿ ಸಂಸ್ಥೆ ಬ್ಲಿಂಕಿಟ್ ಗ್ರಾಹಕರಿಗೆ ಹೊಸ ಸೌಲಭ್ಯವೊಂದನ್ನು ಒದಗಿಸಲು ಮುಂದಾಗಿದೆ. ಗುರುಗ್ರಾಮ್ನ ಆಯ್ದ ಪ್ರದೇಶಗಳಲ್ಲಿ 10 ನಿಮಿಷದಲ್ಲಿ ಆ್ಯಂಬುಲೆನ್ಸ್ ಸೇವೆ ನೀಡುವ ಯೋಜನೆ ಆರಂಭಿಸಿದೆ.
ಕಳೆದ ವರ್ಷದ ನೀಟ್-ಯುಜಿ ಪರೀಕ್ಷೆ ವಿವಾದದ ಬಳಿಕ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ)ಯ ಕಾರ್ಯನಿರ್ವಹಣೆ ಕುರಿತು ಏಳು ಮಂದಿ ತಜ್ಞರನ್ನೊಳಗೊಂಡ ಪರೀಕ್ಷಾ ಸುಧಾರಣಾ ಸಮಿತಿ ಮಾಡಿರುವ ಎಲ್ಲಾ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.