ಜಮ್ಮು ಮತ್ತು ಕಾಶ್ಮೀರದ ಹಿರಿಮೆಗೆ ವಿಶ್ವಮಟ್ಟದ ಗರಿ ಮೂಡಿದ್ದು, ಎಂಜಿನಿಯರಿಂಗ್ ಅದ್ಭುತ, ಸ್ವತಂತ್ರ ಭಾರತದ ಎಂಜಿನಿಯರಿಂಗ್ ನಾವೀನ್ಯತೆ ಹಾಗೂ ನೈಪುಣ್ಯತೆಯನ್ನು ಜಗತ್ತಿಗೆ ಸಾರುವ ವಿಶ್ವದಲ್ಲೇ ಅತಿ ಎತ್ತರದ ರೈಲ್ವೆ ಸೇತುವೆ ‘ಚೀನಾಬ್ ಕಮಾನು ಸೇತುವೆ’ ಅಧಿಕೃತ ರೈಲು ಸಂಚಾರ ಸೇವೆಗೆ ಸಜ್ಜಾಗಿದೆ.
ಇಡೀ ದೇಶ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಮಹಮೋಹನ ಸಿಂಗ್ ಅವರ ಅಗಲಿಕೆಯ ಶೋಕದಲ್ಲಿ ಮುಳುಗಿದ್ದರೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತ್ರ ಹೊಸ ವರ್ಷದ ಆಚರಣೆಗೆ ವಿಯೆಟ್ನಾಂಗೆ ತೆರಳಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
‘ಕೇರಳವು ಮಿನಿ ಪಾಕಿಸ್ತಾನ ಇದ್ದಂತೆ. ಆದ್ದರಿಂದಲೇ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಅಲ್ಲಿ ಗೆದ್ದದ್ದು’ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಹೊಸ ವಿವಾದ ಸೃಷ್ಟಿಸಿದ್ದಾರೆ.
ಎಚ್1ಬಿ ವೀಸಾ ಪರ ಪ್ರಬಲ ವಾದ ಮಂಡಿಸುತ್ತಿರುವ ವಿಶ್ವದ ನಂ.1 ಉದ್ಯಮಿ ಹಾಗೂ ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಎಲಾನ್ ಮಸ್ಕ್, ‘ಎಚ್1ಬಿ ವೀಸಾ ವ್ಯವಸ್ಥೆ ಮುರಿದುಬಿದ್ದಿದೆ. ಅದರಲ್ಲಿ ಸುಧಾರಣೆಗಳನ್ನು ತರುವುದು ಅಗತ್ಯ’ ಎಂದಿದ್ದಾರೆ.
ಮೇಕ್ ಇನ್ ಇಂಡಿಯಾಗೆ ಪ್ರೋತ್ಸಾಹ ನೀಡುವ ಸಲುವಾಗಿ ಲ್ಯಾಪ್ಟಾಪ್ ಮತ್ತು ಗ್ಯಾಜೆಟ್ಗಳ ಆಮದಿನ ಮೇಲೆ ನಿಯಂತ್ರಣ ಹೇರಿದ್ದ ಕೇಂದ್ರ ಸರ್ಕಾರ ಇದೀಗ 2025ರಿಂದ ಗ್ಯಾಜೆಟ್ಗಳ ಆಮದಿಗೆ ಮುಕ್ತ ಅನುಮತಿ ನೀಡಿದೆ.
ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ತನ್ನ ದೇಶದಲ್ಲಿ ಮಹಿಳಾ ವಿರೋಧಿ ನಿಲುವನ್ನು ಮುಂದುವರೆಸಿದೆ. ಮಹಿಳೆಯರಿಗೆ ಎನ್ಜಿಓಗಳು ಉದ್ಯೋಗ ನೀಡಕೂಡದು. ಒಂದು ವೇಳೆ ಉದ್ಯೋಗ ನೀಡಿದರೆ ಅಂತಹ ಸಂಸ್ಥೆಗಳನ್ನು ಬಂದ್ ಮಾಡುವುದಾಗಿ ಎಚ್ಚರಿಸಿದೆ.