ಯಾರಾದರೂ ಬಂದು ನಮ್ಮನ್ನು ಕಾಪಾಡಿ....ಯಾರಾದರೂ, ದಯವಿಟ್ಟು ಬಂದು ನಮ್ಮನ್ನು ಕಾಪಾಡಿ. ನಾವು ನಮ್ಮ ಮನೆಯನ್ನು ಕಳೆದುಕೊಂಡಿದ್ದೇವೆ. ನೌಶೀನ್ ಬದುಕಿದ್ದಾಳೋ ಇಲ್ಲವೋ ಎಂಬುದೂ ಗೊತ್ತಿಲ್ಲ. ಅಕೆ ಕೆಸರಿನಡಿ ಸಿಕ್ಕಿಬಿದ್ದಿದ್ದಾಳೆ....ಇದು ಭೀಕರ ಭೂಕುಸಿತಕ್ಕೆ ತುತ್ತಾದ ವಯನಾಡಿನ ಚೂರಲ್ಮಲ ಗ್ರಾಮದ ಮಹಿಳೆಯೊಬ್ಬರು ತಮ್ಮ ಸಂಬಂಧಿಯೊಬ್ಬರಿಗೆ ಮೊಬೈಲ್ ಕರೆ ಮಾಡಿ ನೆರವಿಗಾಗಿ ಯಾಚಿಸಿದ ವೇಳೆ ಕೇಳಿಬಂದ ಮಾತುಗಳು.