ಋತುಚಕ್ರ ರಜೆಗೆ ಆದೇಶ ನೀಡಲು ಸುಪ್ರೀಂ ನಕಾರ‘ಋತುಚಕ್ರ ರಜೆಯು ನೀತಿಗೆ ಸಂಬಂಧಿಸಿದ ವಿಷಯವಾಗಿದೆ. ಅದು ನ್ಯಾಯಾಲಯಗಳು ಪರಿಶೀಲಿಸುವ ವಿಷಯವಲ್ಲ’ ಎಂದಿರುವ ಸುಪ್ರೀಂ ಕೋರ್ಟ್, ‘ರಾಜ್ಯಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಈ ಕುರಿತು ಮಾದರಿ ನೀತಿ ರೂಪಿಸಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.