ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಪೈಜಾಮ ಹಿಡಿವ ಹೇಳಿಕೆ ಮಹುವಾ ವಿವಾದ
‘ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾಗೆ ಕೊಡೆ ಹಿಡಿಯಲು ಬರಲ್ಲ. ಏಕೆಂದರೆ ತನ್ನ ಬಾಸ್ರ ಪೈಜಾಮ ಹಿಡಿಯುವಲ್ಲಿ ಬ್ಯುಸಿ ಆಗಿದ್ದಾರೆ’ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್ ಮಾಡಿ ವಿವಾದಕ್ಕೆ ಕಾರಣರಾಗಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಯೋಗ ನಿರ್ಧರಿಸಿದೆ.
ಜೈಲಲ್ಲಿರುವ ರಶೀದ್, ಅಮೃತ್ ಪಾಲ್ ಸಂಸದರಾಗಿ ಶಪಥ
ಉಗ್ರವಾದ ಕೇಸಿನಲ್ಲಿ ದಿಲ್ಲಿಯ ತಿಹಾರ್ ಜೈಲಿನಲ್ಲಿರುವ ಎಂಜಿನಿಯರ್ ರಶೀದ್ ಅಲಿಯಾಸ್ ಶೇಖ್ ಅಬ್ದುಲ್ ರಶೀದ್ ಹಾಗೂ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿರುವ ಖಲಿಸ್ತಾನಿ ಪರ ಪ್ರಚಾರಕ ಹಾಗೂ ನಿಯೋಜಿತ ಸಂಸದ ಅಮೃತ್ಪಾಲ್ ಸಿಂಗ್ ಶುಕ್ರವಾರ ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ಕಾಲ್ತುಳಿತ ಘಟನೆ ಬಳಿಕವೂ ಕಮ್ಮಿ ಆಗದ ಬಾಬಾ ಜನಪ್ರಿಯತೆ
121 ಭಕ್ತರನ್ನು ಬಲಿಪಡೆದ ಹಾಥ್ರಸ್ ಭೀಕರ ಕಾಲ್ತುಳಿತದ ಬಳಿಕ, ಅವರ ಮೇಲಿನ ಭಕ್ತಿಯೇನೂ ಕಡಿಮೆ ಆಗಿಲ್ಲ. ಭಕ್ತರು ಭೋಲೆ ಭಾಬಾನನ್ನು ದೇವರ ಸಂದೇಶವಾಹಕ, ಕಾಯಿಲೆಗಳನ್ನು ಗುಣಪಡಿಸುವ ಮಾಂತ್ರಿಕ ಎಂದೆಲ್ಲ ಹೊಗಳುತ್ತಾರೆ.
ಸಲಿಂಗ ವಿವಾಹ: ಜು.10ಕ್ಕೆ ಮರುಪರಿಶೀಲನಾ ಅರ್ಜಿ ವಿಚಾರಣೆ
ಸಲಿಂಗ ವಿವಾಹ ಕಾನೂನು ಬದ್ಧವಲ್ಲವೆಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಮರುಪರಿಶೀಲನೆಗೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ಜುಲೈ 10ಕ್ಕೆ ನಡೆಯಲಿದೆ.
ಪ್ರಳಯದ ಭವಿಷ್ಯ ನುಡಿದ ಕೆಲವೇ ಕ್ಷಣದಲ್ಲಿ ಕಾಲ್ತುಳಿತ: ಭಕ್ತ
ಕಾಲ್ತುಳಿತ ಘಟನೆಯ ಕೆಲವೇ ನಿಮಿಷ ಮುನ್ನ ಭೋಲೆ ಬಾಬಾ ‘ಆಜ್ ಪ್ರಳಯ್ ಆಯೇಗಿ’ (ಇಂದು ಪ್ರಳಯ ಸಂಭವಿಸುತ್ತೆ’ ಎಂದಿದ್ದರು. ಅವರ ಮಾತಿನಂತೆಯೇ ಕಾಲ್ತುಳಿತ ಸಂಭವಿಸಿತು ಎಂದು ಗಾಯಾಳು ಭಕ್ತನೊಬ್ಬ ಹೇಳಿದ್ದಾನೆ.
ಎಚ್ಡಿಕೆ ಹುಚ್ಚ, ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮ: ಡಿಕೆಶಿ
‘ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಒಬ್ಬ ಹುಚ್ಚ. ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಆ.11ಕ್ಕೆ ನೀಟ್-ಪಿಜಿ ಪರೀಕ್ಷೆ
ನೀಟ್-ಪಿಜಿ ಪರೀಕ್ಷೆಯ ಹೊಸ ದಿನಾಂಕ ಪ್ರಕಟವಾಗಿದೆ. 2024ನೇ ವೈದ್ಯಕೀಯ ವಿಜ್ಞಾನ ಪ್ರವೇಶಾತಿ ಪರೀಕ್ಷೆಯು ಆಗಸ್ಟ್ 11ಕ್ಕೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ ತಿಳಿಸಿದೆ.
ರಾಜ್ಯದಲ್ಲಿ ಈಗ ಪ್ರವಾಹ ಆತಂಕ
ರಾಜ್ಯದಲ್ಲಿ ಪುನರ್ವಸು ಮಳೆಯ ಆರ್ಭಟ ಮುಂದುವರಿದಿದ್ದು ಕೊಡಗು, ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.
ದೇಶದ ರಕ್ಷಣಾ ಉತ್ಪಾದನೆ ಸಾರ್ವಕಾಲಿಕ ಗರಿಷ್ಠ ದಾಖಲೆ
ದೇಶದ ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ನೀತಿಗೆ ಉತ್ತೇಜನ ನೀಡಿದ ಬಳಿಕ ಉಂಟಾಗುತ್ತಿರುವ ಭಾರೀ ಬದಲಾವಣೆ 2023ನೇ ಸಾಲಿನಲ್ಲಿ ಇನ್ನೊಂದು ಮೈಲುಗಲ್ಲು ಸ್ಥಾಪಿಸಿದ್ದು, ವಾರ್ಷಿಕ ರಕ್ಷಣಾ ಉತ್ಪಾದನೆ 1.27 ಲಕ್ಷ ಕೋಟಿ ರು. ಮೌಲ್ಯವನ್ನು ತಲುಪಿದೆ.
ಬಜಾಜ್ನಿಂದ ವಿಶ್ವದ ಮೊದಲ ಸಿಎನ್ಜಿ ಬೈಕ್ ಬಿಡುಗಡೆ
ಸಿಎನ್ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ) ಮೂಲಕ ಚಲಿಸುವ ವಿಶ್ವದ ಮೊದಲ ಮೋಟಾರ್ ಸೈಕಲ್ನ್ನು ಬಜಾಜ್ ಕಂಪನಿ ಶುಕ್ರವಾರ ಬಿಡುಗಡೆ ಮಾಡಿದೆ. ಇದಕ್ಕೆ ‘ಫ್ರೀಡಂ’ ಎಂದು ಹೆಸರಿಡಲಾಗಿದೆ ಹಾಗೂ ಇದರ ಬೆಲೆ ₹ 95 ಸಾವಿರ ರು.ನಿಂದ ಆರಂಭವಾಗಲಿದೆ.
< previous
1
...
369
370
371
372
373
374
375
376
377
...
702
next >
Top Stories
ಮಳೆ ಹಾನಿ : ಸಮೀಕ್ಷೆ ನಡೆಸಿ ಸಂತ್ರಸ್ತರಿಗೆ ತಕ್ಷಣ ಪರಿಹಾರಕ್ಕೆ ಸಿಎಂ ಸೂಚನೆ
ಗೃಹ ಸಚಿವ ಜಿ.ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಯ ಮೇಲೆ ಇಡಿ ದಾಳಿ
ಕನ್ನಡಕ್ಕೆ ಮೊದಲ ಬೂಕರ್ ಪ್ರಶಸ್ತಿ ತಂದುಕೊಟ್ಟ ಹಾಸನದ ಲೇಖಕಿ ಬಾನು ಮುಷ್ತಾಕ್
ಲಿಂಗಾಯತ ಸಚಿವರು ಒಟ್ಟಾಗಿ ಸಲ್ಲಿಸಿದ ಅಭಿಪ್ರಾಯ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ
ಏರ್ ಟರ್ಬುಲನ್ಸ್ಗೆ ಸಿಕ್ಕ ದಿಲ್ಲಿ- ಶ್ರೀನಗರ ವಿಮಾನ : ಮೂತಿ ಜಖಂ