ಲೋಕಸಭೆ ಚುನಾವಣೆ ಮುನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗುರುವಾರ ಮಧ್ಯಂತರ ಬಜೆಟ್ ಮಂಡಿಸಿದೆ. ಈ ಬಜೆಟ್ ಕೇವಲ ಚುನಾವಣೆ ಪೂರ್ವದ್ದಾಗಿದ್ದು, ಜುಲೈನಲ್ಲಿ ಪೂರ್ಣಪ್ರಮಾಣದ ಆಯವ್ಯಯ ಪತ್ರ ಮಂಡನೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2070ನೇ ಇಸವಿಯ ಹೊತ್ತಿಗೆ ಶೂನ್ಯ ಮಾಲಿನ್ಯ (ನೆಟ್ ಝೀರೋ) ಸಾಧಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಇದಕ್ಕಾಗಿ 1 ಗಿಗಾವ್ಯಾಟ್ನಷ್ಟು ವಿದ್ಯುತ್ತನ್ನು ಕಡಲತೀರದಿಂದ ಉತ್ಪಾದಿಸಲು ಹೂಡಿಕೆ ಮಾಡಲಾಗುತ್ತಿದೆ.