ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ದೆಹಲಿ ಆಮ್ ಆದ್ಮಿ ಪಕ್ಷದ ಹಲವು ಸಚಿವರು, ನಾಯಕರು ವಿವಿಧ ಹಗರಣಗಳಲ್ಲಿ ಜೈಲು ಪಾಲಾದ ಬೆನ್ನಲ್ಲೇ, ಇದೀಗ ಸಚಿವ ರಾಜ್ ಕುಮಾರ್ ಆನಂದ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮದುವೆಗೆ ಕಾನೂನಾತ್ಮಕ ಮಾನ್ಯತೆ ದೊರೆಯಲು ಅದರಲ್ಲಿ ಕನ್ಯಾದಾನ ಶಾಸ್ತ್ರವನ್ನು ಮಾಡಿರಲೇಬೇಕೆಂದೇನೂ ಇಲ್ಲ. ಆದರೆ ದಂಪತಿಗಳು ಕಡ್ಡಾಯವಾಗಿ ಸಪ್ತಪದಿಯನ್ನು ತುಳಿದಿರಬೇಕು ಎಂಬುದಾಗಿ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕಾಂಗ್ರೆಸ್ಗೆ ಜಗನ್ ಸೋದರಿ ಶರ್ಮಿಳಾ ಆಗಮನದಿಂದ ಆನೆಬಲ ಬಂದಂತಾಗಿದ್ದು, ಕುಟುಂಬದ ಭದ್ರಕೋಟೆ ಕಡಪಾ ಕ್ಷೇತ್ರದಲ್ಲಿ ಸ್ವತಃ ಕಣಕ್ಕಿಳಿಯುವ ಮೂಲಕ ಸೋದರ ಅವಿನಾಶ್ ರೆಡ್ಡಿಯ ಹ್ಯಾಟ್ರಿಕ್ ಹಾದಿಯನ್ನು ದುರ್ಗಮಗೊಳಿಸಿದ್ದಾರೆ.
ಲೋಕಸಭೆ ಚುನಾವಣೆ ರಂಗು ತಾರಕಕ್ಕೇರುತ್ತಿದ್ದಂತೆಯೇ ಆದಿವಾಸಿಗಳೇ ಹೆಚ್ಚಿರುವ ಮಧ್ಯ ಭಾರತದಲ್ಲಿರುವ ರಾಜ್ಯ ಛತ್ತೀಸ್ಗಢ ಕೂಡ ದೇಶದ ಗಮನ ಸೆಳೆದಿದೆ.
ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಎರಡನೇ ಬಾರಿ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟದಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಿಸಲಿದೆ.
ಈ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಪತ್ತಿನ ಸಮಾನ ಹಂಚಿಕೆ ಕುರಿತು ಸಮೀಕ್ಷೆ ಮಾಡಲಾಗುವುದು ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.