ಆರ್ಕಾಂ ಸಂಸ್ಥೆಯು ಸಾಲವನ್ನು ತೆಗೆದುಕೊಂಡ ಉದ್ದೇಶ ಬಿಟ್ಟು ಬೇರೆ ಕೆಲಸಕ್ಕೆ ಆ ಮೊತ್ತವನ್ನು ಬಳಸಿರುವ ಹಿನ್ನೆಲೆಯಲ್ಲಿ, ಅದನ್ನು ಎಸ್ಬಿಐ ವಂಚನೆ ಎಂದು ಪರಿಗಣಿಸಿದ್ದು, ಅದರ ನಿರ್ದೇಶಕ ಅನಿಲ್ ಅಂಬಾನಿ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ಗೆ (ಆರ್ಬಿಐ) ವರದಿ ಸಲ್ಲಿಸಿದೆ.
ಟಿಬೆಟನ್ ಧರ್ಮಗುರು ದಲೈಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಷಯದಲ್ಲಿದ್ದ ಊಹಾಪೋಹಕ್ಕೆ ಕೊನೆಗೂ ತೆರೆ ಬಿದ್ದಿದೆ. 2015ರಲ್ಲಿ ರಚಿಸಿದ್ದ ಗಾಡೆನ್ ಫೋಡ್ರಾಂಗ್ ಟ್ರಸ್ಟ್ಗೆ ಮಾತ್ರ ನನ್ನ ಉತ್ತರಾಧಿಕಾರಿಯನ್ನು ಗುರುತಿಸುವ ಅಧಿಕಾರವಿದೆ ಎಂದು 14ನೇ ದಲೈಲಾಮಾ ಆಗಿರುವ ಟೆಂಜಿನ್ ಗ್ಯಾಟ್ಸೊ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರ ಸ್ಲ್ಯಾಬ್ಗಳ ಪುನರ್ರಚನೆಗೆ ಚಿಂತನೆ ನಡೆಸಿದೆ. ಈ ಪ್ರಕಾರ ಹಲವು ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ದರವನ್ನು ಶೇ.12ರಿಂದ ಶೇ.5ಕ್ಕೆ ತಗ್ಗಿಸಬೇಕು ಎಂಬುದು ಒಂದು ಪ್ರಸ್ತಾಪ
ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್ ಅವರ್ನಲ್ಲಿ ಓಲಾ, ಉಬರ್, ರ್ಯಾಪಿಡೋ ಕ್ಯಾಬ್, ಆಟೋ, ಬೈಕ್ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ.