ಮತ್ತೊಮ್ಮೆ ಸ್ಪರ್ಧಿಸುವ ನೈತಿಕತೆ ಗದ್ದಿಗೌಡರಿಗೆ ಇಲ್ಲರಬಕವಿ-ಬನಹಟ್ಟಿ: ಸತತ 4 ಬಾರಿ ಬಾಗಲಕೋಟೆ ಸಂಸದರಾಗಿರುವ ಬಿಜೆಪಿಯ ಪಿ.ಸಿ.ಗದ್ದಿಗೌಡರ ಸಾಧನೆ ಶೂನ್ಯ. ಅವರಿಗೆ ಮತ್ತೊಮ್ಮೆ ಸ್ಪರ್ಧೆ ಮಾಡುವ ನೈತಿಕತೆಯಿಲ್ಲ ಎಂದು ಸಚಿವ ಶಿವಾನಂದ ಪಾಟೀಲ ಟೀಕಿಸಿದರು. ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮಪೂರದ ದಾನೇಶ್ವರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನೇಕಾರ, ರೈತ, ಕೂಲಿ ಕಾರ್ಮಿಕರ ಧ್ವನಿಯಾಗಿ ಕೆಲಸ ನಿರ್ವಹಿಸಿದ್ದೇ ಕಾಂಗ್ರೆಸ್. ಇಂದಿಗೂ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಶಸ್ವಿಯಾಗಿದೆ.