ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹಮಹಾಲಿಂಗಪುರ ಬೇಕಾದಾಗ ಮಾಧ್ಯಮವನ್ನು ಹೊಗಳುವುದು, ಬೇಡವಾದಾಗ ತೆಗಳುವುದು ಕೆಲ ರಾಜಕಾರಣಿಗಳಿಗೆ ಪರಿಪಾಠವಾಗಿದೆ ಎಂದು ಹಿರಿಯ ಪತ್ರಕರ್ತ ಜಯರಾಮ ಶೆಟ್ಟಿ ಹೇಳಿದರು.ಮಾಧ್ಯಮಗಳ ವಿರುದ್ಧ ಸಂಸದ ಅನಂತ ಕುಮಾರ ಹೆಗಡೆ ಅವಹೇಳನಕಾರಿ ಹೇಳಿಕೆ ಖಂಡಿಸಿ, ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಥಳೀಯ ಪತ್ರಕರ್ತರು ಪ್ರತಿಭಟನೆ ನಡೆಸ, ಪುರಸಭೆ ಮುಖ್ಯಾಧಿಕಾರಿಗಳ ಪರವಾಗಿ ಅಧಿಕಾರಿ ಮಹಾಲಿಂಗ ಮುಗಳಖೊಡ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.