ಹೆಚ್ಚಾದ ಡೆಂಘೀ ಜ್ವರ : ಜಿಲ್ಲೆ ಜನತೆ ತತ್ತರಮುಂಗಾರು ಮಳೆ ಆರಂಭಗೊಂಡ ಬಳಿಕ ಗಡಿ ಜಿಲ್ಲೆ ಬೆಳಗಾವಿ ಜಿಲ್ಲೆಯಲ್ಲಿ ಡೆಂಘೀ ಜ್ವರ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದು, ತೀವ್ರ ಆತಂಕ ಮೂಡಿಸಿದೆ. ಮೋಡ ಕವಿದ ವಾತಾವರಣ, ಜಿಟಿ ಜಿಟಿ ಮಳೆ ಹಾಗೂ ಬಿಸಿಲಿನ ವಾತಾವರಣ ಇರುವುದರಿಂದ ಸೊಳ್ಳೆಯ ಉತ್ಪತ್ತಿಗೆ ಅನುಕೂಲವಾಗಿದೆ. ಹಾಗಾಗಿ, ಡೆಂಘೀ ಜ್ವರ ಪ್ರಕರಣ ದಾಂಗುಡಿ ಇಟ್ಟಿದೆ. ಜೂನ್ ಒಂದೇ ತಿಂಗಳಲ್ಲೇ 68 ಡೆಂಘೀ ಪ್ರಕರಣಗಳು ದೃಢಪಟ್ಟಿವೆ.