ಹನಮಂತ ದೇವರ ದೇವಸ್ಥಾನದ ಜಾತ್ರಾ ಮಹೋತ್ಸವ ಸಂಪನ್ನಕನ್ನಡಪ್ರಭ ವಾರ್ತೆ ಬೈಲಹೊಂಗಲ ಪಟ್ಟಣದ ಹಳೆಯ ಹನಮಂತ ದೇವರ ದೇವಸ್ಥಾನದ ಜಾತ್ರಾ ಮಹೋತ್ಸವವು ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆದು ಸಂಪನ್ನಗೊಂಡಿತು. ಐದು ದಿನಗಳ ಕಾಲ ನೆರವೇರಿದ ಜಾತ್ರಾ ಮಹೋತ್ಸವದಲ್ಲಿ ಪ್ರತಿದಿನ ಹನಮಂತ ದೇವರ ಪ್ರತಿಮೆಗೆ ಅಭಿಷೇಕ, ಕುಂಕುಮಾರ್ಚಣೆ, ಅಲಂಕಾರ, ಬುತ್ತಿ ಪೂಜೆ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.