ಪಾಲಕರ ಸಭೆ ನಡೆಸಿ ಸಲಹೆ, ಸೂಚನೆ ನೀಡಿ: ಇಒ ಸುಭಾಸಕನ್ನಡಪ್ರಭ ವಾರ್ತೆ ಬೈಲಹೊಂಗಲ ತಾಲೂಕಿನ ಎಲ್ಲ ಕೂಸಿನ ಮನೆ ಕೇಂದ್ರಗಳಲ್ಲಿ ಕಡ್ಡಾಯವಾಗಿ ಪಾಲಕರ ಸಭೆಯನ್ನು ನಡೆಸಿ ಸಲಹೆ, ಸೂಚನೆ ನೀಡಬೇಕು ಎಂದು ತಾಪಂ ಇಒ ಸುಭಾಸ ಸಂಪಗಾಂವಿ ಹೇಳಿದರು. ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಸೋಮವಾರ ನಡೆದ ಕೂಸಿನ ಮನೆ ಪಾಲಕರ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನರೇಗಾ ಕೂಲಿ ಕಾರ್ಮಿಕರು ತಮ್ಮ 3 ವರ್ಷದೊಳಗಿನ ಮಕ್ಕಳನ್ನು ಕೂಸಿನ ಮನೆ ಕೇಂದ್ರಕ್ಕೆ ನಿರ್ಭಿತಿಯಿಂದ ಸೇರಿಸಿ, ಗಂಡ-ಹೆಂಡತಿ ಉದ್ಯೋಗ ಖಾತ್ರಿ ಕೆಲಸವನ್ನು ವರ್ಷದಲ್ಲಿ 100 ದಿನ ಪೂರ್ಣಗೊಳಿಸಿ ಪ್ರತಿ ದಿನ ಕೂಲಿ ₹349 ಪಡೆದು ಸಂಜೆ ಮನೆಗೆ ನಿಮ್ಮ ಮಗುವನ್ನು ಕರೆದುಕೊಂಡು ಹೋಗಬಹುದು.