ಸೋರುತಿದೆ, ಸೊರಗುತಿದೆ ಮಿನಿವಿಧಾನಸೌಧ!ಕನ್ನಡಪ್ರಭ ವಾರ್ತೆ ರಾಮದುರ್ಗ ಒಂದೇ ಸೂರಿನಡಿ ಎಲ್ಲ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿ ಜನರಿಗೆ ಅನುಕೂಲ ಒದಗಿಸುವ ನಿರೀಕ್ಷೆಯಲ್ಲಿ ನಿರ್ಮಾಣಗೊಂಡಡಿರುವ ಮಿನಿ ವಿಧಾನಸೌಧ ಲೋಕಾರ್ಪಣೆಗೆ ಒಂದೂವರೆ ದಶಕ ಕಳೆದಿದೆ. ಆದರೆ, ಇದುವರೆಗೂ ಕಟ್ಟಣ ನಿರ್ಮಾಣ ಮಾಡಿರುವ ಸಂಸ್ಥೆಯಿಂದ ಸಂಬಂಧಿಸಿದ ಇಲಾಖೆಗೆ ಕಟ್ಟಡದ ಹಸ್ತಾಂತರ ಮಾತ್ರ ಇನ್ನೂ ನೆನೆಗುದಿಗೆ ಬಿದ್ದಿದೆ. ಇದರ ಪರಿಣಾಮ ಮಿನಿ ವಿಧಾನಸೌಧದ ನಿರ್ವಹಣೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ದೊಡ್ಡ ಸಮಸ್ಯೆಯಾಗಿದ್ದು, ಕಾರ್ಯನಿರ್ವಹಿಸುತ್ತಿರುವ ಕಂದಾಯ ಇಲಾಖೆಗೆ ನಿರ್ವಹಣೆ ಮಾಡಲಾಗದೇ ಬಾಯೊಳಗಿನ ಬಿಸಿ ತುಪ್ಪ ನುಂಗದಂತಾಗಿದೆ