ಹುತ್ತಕ್ಕೆ ಹಾಕುವ ಹಾಲನ್ನು ಹಸಿದ ಮಕ್ಕಳಿಗೆ ನೀಡಿಕನ್ನಡಪ್ರಭ ವಾರ್ತೆ ಬೆಳಗಾವಿ ಕಲ್ಲಿನ ನಾಗರಕ್ಕೆ, ಹುತ್ತಕ್ಕೆ ಹಾಲು ಹಾಕಿ ಮಣ್ಣು ಪಾಲು ಮಾಡುವ ಬದಲು ಆ ಹಾಲನ್ನು ಮಕ್ಕಳಿಗೆ, ಹಸಿದವರಿಗೆ ನೀಡಿ ಎಂದು ಸತೀಶ್ ಶುಗರ್ಸ್ ನಿರ್ದೇಶಕ, ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು. ಕಣಬರಗಿಯ ಮಹೇಶ ಫೌಂಡೇಶನ್‌ನಲ್ಲಿ ಶುಕ್ರವಾರ ಮಾನವ ಬಂಧುತ್ವ ವೇದಿಕೆ ಹಾಗೂ ಬಸವಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ, ರಾಷ್ಟ್ರೀಯ ಬಸವದಳ ಮತ್ತು ಬಸವ ಕಾಯಕ ಜೀವಿಗಳ ಸಂಘ ಹಾಗೂ ಮಹೇಶ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.