ಬಿರ್ಯಾನಿ ತಡವಾಗಿ ತಂದಿದ್ದಕ್ಕೆ ಗುಂಪುಗಳ ಮಧ್ಯೆ ಗಲಾಟೆ!ಜನ್ಮದಿನದ ಕಾರ್ಯಕ್ಕೆ ಆರ್ಡರ್ ಮಾಡಲಾಗಿದ್ದ ಬಿರ್ಯಾನಿ ಸರಿಯಾದ ಸಮಯಕ್ಕೆ ಬರಲಿಲ್ಲ ಎಂದು ಎರಡು ಗುಂಪುಗಳ ಮಧ್ಯ ಮಾರಾಮಾರಿ ನಡೆದಿದ್ದು, ಎರಡೂ ಗುಂಪುಗಳಿಂದ ದೂರು, ಪ್ರತಿದೂರು ದಾಖಲಾಗಿದೆ.ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಸಚೀನ ಲಕ್ಷ್ಮಣ ದಡ್ಡಿ ಸೇರಿದಂತೆ ಇನ್ನೂ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಗಲಾಟೆಯಲ್ಲಿ ಗಾಂಧಿ ನಗರದ ಸಲೀಂ ನದಾಫ, ಮುಸ್ತಾಕ ದಸ್ತಗಿರ ದಾವಣಗೆರೆ, ಅಮನ ನಗರದ ಅಫ್ಜಲ್ ಮಹಮ್ಮದಸಾಬ ಸಯ್ಯದ ಎಂಬುವರಿಗೆ ಗಾಯವಾಗಿದ್ದರಿಂದ ದೂರು ದಾಖಲಾಗಿದೆ. ಇನ್ನು ಸಚಿನ್ ದಡ್ಡಿ ಕಡೆಯಿಂದಲೂ ದೂರುದಾರರ ವಿರುದ್ಧ ಅಟ್ರಾಸಿಟಿ ಕುರಿತು ಪ್ರತಿದೂರು ದಾಖಲಾಗಿದೆ.