ಹಬ್ಬನಹಟ್ಟಿ ದೇವಾಲಯ ಸಂಪೂರ್ಣ ಜಲಾವೃತಖಾನಾಪುರ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ನಡೆದಿರುವ ಮಳೆರಾಯನ ಆರ್ಭಟ ಗುರುವಾರವೂ ಮುಂದುವರೆದಿದೆ. ಕಣಕುಂಬಿಯಲ್ಲಿ 167 ಮಿ.ಮೀ, ಜಾಂಬೋಟಿಯಲ್ಲಿ 102 ಮಿ.ಮೀ, ಅಸೋಗಾ 56 ಮಿ.ಮೀ, ಗುಂಜಿ 78 ಮಿ.ಮೀ, ಲೋಂಡಾ 92 ಮಿ.ಮೀ, ಖಾನಾಪುರ ಪಟ್ಟಣ 75 ಮಿ.ಮೀ, ನಾಗರಗಾಳಿ 33 ಮಿ.ಮೀ, ಕಕ್ಕೇರಿ 31.4 ಮಿ.ಮೀ ಮತ್ತು ಬೀಡಿ ಭಾಗದಲ್ಲಿ 20 ಮಿ.ಮೀಗಳಷ್ಟು ಮಳೆ ಸುರಿದಿದೆ. ಇದುವರೆಗೂ ಮಳೆಯಿಂದಾಗಿ ತಾಲೂಕಿನಲ್ಲಿ ಯಾವುದೇ ಆಸ್ತಿಹಾನಿ ಅಥವಾ ಜೀವಹಾನಿ ಸಂಭವಿಸಿದ ವರದಿಯಾಗಿಲ್ಲ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.