ಅಧಿಕಾರಿ-ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಸಮತಟ್ಟು ಸ್ಥಳ, ಮೆಟ್ಟಿಲು ಧ್ವಂಸಹುಕ್ಕೇರಿ ತಾಲೂಕಿನ ಸಾರಾಪುರ ಗ್ರಾಮದ ಪರಿಶಿಷ್ಟ ಜಾತಿ (ಎಸ್‌ಸಿ) ಕಾಲೋನಿಯಲ್ಲಿ ಲಕ್ಷಾಂತರ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಸಮತಟ್ಟು ಪ್ರದೇಶ ಮತ್ತು ಮೆಟ್ಟಿಲುಗಳನ್ನು ಧ್ವಂಸ ಮಾಡಲಾಗಿದೆ. ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ (ಒಎಚ್‌ಟಿ) ನಿರ್ಮಿಸಲು ಈ ಸ್ಥಳವನ್ನು ಅಪಾರ ಪ್ರಮಾಣದಲ್ಲಿ ಅಗೆದು ಕಂದಕ ಸೃಷ್ಟಿಸಲಾಗಿದೆ.