• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • belagavi

belagavi

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಆಂಗ್ಲ ನಾಮಫಲಕಗಳಿಗೆ ಮಸಿ ಬಳೆದು ಆಕ್ರೋಶ
ಬೈಲಹೊಂಗಲದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಂಗಡಿ-ಮುಂಗಟ್ಟುಗಳ ಆಂಗ್ಲ ಭಾಷೆಯ ನಾಮಫಲಕಗಳಿಗೆ ಮಂಗಳವಾರ ಮಸಿ ಬಳೆದು, ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಆಂಗ್ಲ ಭಾಷೆಯ ನಾಮಫಲಕಗಳಿಗೆ ಮಸಿ ಬಳೆದು ಹರಿದು ಹಾಕುತ್ತಿದ್ದಂತೆ ಅಂಗಡಿಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಯುನಿಯನ್ ಬ್ಯಾಂಕ್ ಮ್ಯಾನೇಜರ್ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಮತ್ತಷ್ಟು ಆಕ್ರೋಶಗೊಂಡ ಪ್ರತಿಭಟನಾಕಾರರು ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಮಾತನಾಡಬೇಕು. ಇಲ್ಲದಿದ್ದರೇ ರಾಜೀನಾಮೆ ನೀಡಿ ಹೋಗಬೇಕೆಂದು ಆಗ್ರಹಿಸಿ ನಾಮಫಲಕಗಳನ್ನು ಹರಿದು ಹಾಕಲಾಯಿತು.
ಸ್ವಾಭಿಮಾನ, ವ್ಯಕ್ತಿತ್ವ ಹೊಂದಲು ಶಿಕ್ಷಣ ಮುಖ್ಯ
ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಸರ್ಕಾರಿ ಸರ್ದಾರ್ ಪಪೂ ಕಾಲೇಜು ಇವರ ಸಹಯೋಗದಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್‌ ಓದು ಕಾರ್ಯಕ್ರಮ ಉದ್ಘಾಟಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಎಚ್‌.ಬಿ ಮಾಚನಾಡಿ, ಬೆಳಗಾವಿ ಜೀವಣದಲ್ಲಿ ಸ್ವಾಭಿಮಾನ ಬದುಕು ನಡೆಸಲು ಹಾಗೂ ಒಳ್ಳೆಯ ವ್ಯಕ್ತಿತ್ವ ಹೊಂದಲು ಪ್ರತಿಯೊಬ್ಬರಿಗೂ ಶಿಕ್ಷಣ ಕಲಿಯುವುದು ಪ್ರಮುಖವಾಗಿದೆ. ಎಂದರು.
51 ಹೊಸ ತಾಲೂಕುಗಳಿಗೆ ಶಿಶು ಅಭಿವೃದ್ಧಿ ಕಚೇರಿ ಮಂಜೂರಿ ಮಾಡಿ
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ 51 ತಾಲೂಕುಗಳಿಗೆ ಶಿಶು ಅಭಿವೃದ್ಧಿ ಕಚೇರಿ ಮಂಜೂರು ಮಾಡುವಂತೆ ಮತ್ತು ಸಿಬ್ಬಂದಿ ನೀಡುವಂತೆ ಹಾಗೂ ಸಕ್ಷಮ್‌ ಯೋಜನೆಯಡಿಯ ಅಂಗನವಾಡಿ ಕೇಂದ್ರಗಳನ್ನು ಸ್ಮಾರ್ಟ್‌ ಕ್ಲಾಸ್ ರೂಂ ಆಗಿ ಪರಿವರ್ತಿಸಲು ಸಹ ಹೆಬ್ಬಾಳಕರ್ ಅವರು ಸ್ಮೃತಿ ಇರಾನಿ ಬಳಿ ಮನವಿ ಮಾಡಿದರು.
ಪಾನಮತ್ತಿನಲ್ಲಿ ಬಸ್‌ ಚಲಾಯಿಸಿದ ಚಾಲಕ- ಅದೃಷ್ಟವಶಾತ್ ತಪ್ಪಿದ ಅನಾಹುತ
ಪಾನಮತ್ತನಾಗಿ ಬೈಲಹೊಂಗಲದಿಂದ ಇಟಗಿ ಕ್ರಾಸ್‌ಗೆ ಬಸ್‌ನ್ನು ಅಜಾಗರೂಕತೆಯಿಂದ ಚಲಾಯಿಸುತ್ತ ಮೊದಲು ಟೋಲ್‌ ನಾಕಾದಲ್ಲಿನ ಗೋಡೆಗೆ ತಾಗಿಸಿ ಮುನ್ನಡೆದು ನಂತರ ಯರಡಾಲ ಕ್ರಾಸ್‌ ಹತ್ತಿರದ ದೊಡ್ಡ ತಗ್ಗಿನಲ್ಲಿ ಇನ್ನೇನು ಬಸ್ ಬೀಳಿಸುತ್ತಾನೆ ಎನ್ನುವಷ್ಟರಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡಿದ್ದಾರೆ.
ರಾಸಾಯನಿಕ ಗೊಬ್ಬರ ಬಳಸಿ ಭೂಮಿಯ ಫಲವತ್ತತೆ ಹಾಳು ಮಾಡಬೇಡಿ
ಅಥಣಿ ತಾಲೂಕಿನ ಶೇಗುಣಿಸಿ ಗ್ರಾಮದಲ್ಲಿ ಸದ್ಗುರು ಸಮರ್ಥ ಕಲ್ಮೇಶ್ವರ ಮಹಾರಾಜರ ಜ್ಞಾನಯಜ್ಞ ಸಪ್ತಾಹ ಹಾಗೂ ಲಿಂ.ಗುರುಪಾದ ಯಲಡಗಿ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾವಯುವ ಕೃಷಿ ಚಿಂತನಾಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಹೇಶಾನಂದ ಸ್ವಾಮೀಜಿ ಮಾತನಾಡಿ ರಾಸಾಯನಿಕ ಗೊಬ್ಬರ ಬಳಸಿ ಭೂಮಿಯ ಫಲವತ್ತತೆ ಹಾಳು ಮಾಡಬೇಡಿ ಎಂದರು.
ಎಲ್ಲ ಧಾರ್ಮಿಕ ಸಂಪ್ರದಾಯಗಳು ಒಂದಾಗಬೇಕು
ಎಲ್ಲ ಮಠಗಳ ಮಧ್ಯೆ ಆತ್ಮೀಯತೆ ಬಂದರೇ, ಎಲ್ಲ ಧಾರ್ಮಿಕ ಸಂಪ್ರದಾಯಗಳೂ ಒಂದಾದರೇ ದೇಶ ಅಖಂಡವಾಗುತ್ತದೆ. ದೇಶದ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ ಎಂದು ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮಂದಿರಗಳಿವ ದೇಶದಲ್ಲಿ ಧರ್ಮ ಉಳಿಯುವುದು
ಪಟ್ಟಣದ ಕೇಶವ ಕಲಾಭವನದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ವಿಶ್ವ ಹಿಂದು ಪರಿಷತ್‌ ಚಿಕ್ಕೋಡಿ ಜಿಲ್ಲೆ ಸಹಯೋಗದಲ್ಲಿ ಜ.22 ರಂದು ನಡೆಯಲಿರುವ ಆಯೋಧ್ಯ ಶ್ರೀರಾಮ ಪ್ರಾಣ ಪ್ರತಿಷ್ಠಾ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಬಂದ ಅಕ್ಷತಾ ಕಳಶ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಗಳು ಯಾವ ದೇಶದಲ್ಲಿ ಮಂದಿರಗಳಿವೆ ಆ ದೇಶದಲ್ಲಿ ಧರ್ಮ ಉಳಿಯುತ್ತದೆ ಎಂದರು.
ಎನ್‌ಎಚ್‌ಆರ್‌ಸಿ ಸಲಹೆ ಮೇರೆಗೆ ಮುಂದಿನ ಕ್ರಮ
ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ಅವರು, ಮಹಿಳೆ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಸಿಐಡಿ ತನಿಖೆಗೆ ಒಪ್ಪಿಸುವುದಕ್ಕಿಂತ ಮೊದಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರು ಆರೋಪಿಗಳು ಕಾನೂನು ಸಂಘರ್ಷಕ್ಕೊಳಗಾದವರನ್ನು ಬಂಧಿಸಬೇಕಿದೆ. ಪೊಲೀಸರು ಒಳ್ಳೆಯ ತನಿಖೆ ಮಾಡಿದ್ದಾರೆ ಎಂದು ಅವರ ಕಾರ್ಯವನ್ನು ಶ್ಲಾಘಿಸಿದರು.
ಇಬ್ಬರು ಮಕ್ಕಳಿಗೆ ಯಶಸ್ವಿ ಪ್ರೀ ಎಮ್ಟಿವ್ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್
ಹುಕ್ಕೇರಿ ತಾಲೂಕಿನ 17 ವರ್ಷದ ಬಾಲಕಿ ಮತ್ತು ಹಳಿಯಾಳದ 9 ವರ್ಷದ ಬಾಲಕನಿಗೆ ಬೆಳಗಾವಿಯ ಕೆಎಲ್ಇಎಸ್ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಯಶಸ್ವಿಯಾಗಿ ಪ್ರೀ ಎಮ್ಟಿವ್ ಮೂತ್ರಪಿಂಡ ಕಸಿ ಮಾಡಲಾಯಿತು. 17 ವರ್ಷದ ಹುಡುಗಿ ತನ್ನ ತಾಯಿಯಿಂದ ಮತ್ತು 9 ವರ್ಷದ ಹುಡುಗ ತನ್ನ ಅಜ್ಜಿಯಿಂದ ಕಿಡ್ನಿ ಪಡೆದಿದ್ದಾರೆ. ಇಬ್ಬರೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಅವರನ್ನು ಉಳಿಸಿಕೊಳ್ಳಲು ಡಯಾಲಿಸಿಸ್ ಅಥವಾ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌ಗೆ ಅನಿವಾರ್ಯವಾಗಿತ್ತು.
ನೀರನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ
ಶಿಕ್ಷಕರು, ವಿದ್ಯಾರ್ಥಿಗಳು, ಭಾಗದ ಸಮಸ್ತ ರೈತರು ಕೂಡಿಕೊಂಡು ನಿರ್ಮಲ ಮಲಪ್ರಭಾ ನದಿ ದಡವನ್ನು ಭಾನುವಾರ ಶುಚಿಗೊಳಿಸುವ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ ನೀರನ್ನು ರಕ್ಷಣೆ ಮಾಡುವಂತೆ ಕರೆ ನೀಡಿದರು.
  • < previous
  • 1
  • ...
  • 412
  • 413
  • 414
  • 415
  • 416
  • 417
  • 418
  • 419
  • 420
  • ...
  • 424
  • next >
Top Stories
ಖರ್ಗೆ ಮುಖ್ಯಮಂತ್ರಿ ಆಗಬಾರದು ಅಂತ ಏನೂ ಇಲ್ಲವಲ್ಲ? : ಸತೀಶ್‌
ಒಬ್ಬರು ಸಿಎಂ ಇದ್ದಾಗ ಮತ್ತೊಬ್ಬ ಆಗಲು ಹೇಗೆ ಸಾಧ್ಯ? : ದಿನೇಶ್‌
ಕೋಲಾರ ಮಹಿಳೆಯಲ್ಲಿ ವಿಶ್ವದಲ್ಲೇ ಎಲ್ಲೂ ಇಲ್ಲದ ರಕ್ತದ ಗುಂಪು ಪತ್ತೆ
ತುಂಗಭದ್ರಾ ಅಚ್ಚುಕಟ್ಟು ಕ್ಯಾನ್ಸರ್‌ ಹಬ್‌!
ಪಿಯುಸಿ ಮೌಲ್ಯಮಾಪಕರಿಗೆ ಇನ್ನೂ ಸಿಗದ ಸಂಭಾವನೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved