ರಬಕವಿ ಚಾವಡಿಗೆ ಬಂದೀತೆ ಹಳೆಯ ವೈಭವ?ರಬಕವಿ-ಬನಹಟ್ಟಿ ತಾಲೂಕು ಘೋಷಣೆಯಾಗಿ ಎರಡು ದಶಕ ಕಳೆದರೂ ಇಲ್ಲಿನ ಸರ್ಕಾರಿ ಕಟ್ಟಡಗಳು ಮಾತ್ರ ಅನಾಥವಾಗಿವೆ. ನೂತನ ತಾಲೂಕಿಗೆ ಬೇಕಾದ ಕಚೇರಿಗಳು ಆರಂಭವಾಗುತ್ತಿಲ್ಲ ಎಂದು ನಾಗರಿಕರು ಒಂದೆಡೆ ದೂರುತ್ತಿದ್ದರೆ, ಒಂದು ಕಾಲದಲ್ಲಿ ವೈಭವದಿಂದ ಮೆರೆದ ಸರ್ಕಾರಿ ಕಟ್ಟಡಗಳು ಇಂದು ಬಳಕೆಯಾಗದೇ ಪಾಳು ಬಿದ್ದಿವೆ.