ಪ್ರಾಣ ಕಳೆದುಕೊಂಡರ ಮನೆಯಲ್ಲಿ ಮೌನ!ಪ್ರಯಾಗರಾಜ್‌ನ ಮಹಾಕುಂಭಮೇಳಕ್ಕೆ ತೆರಳಿದ್ದ ಬೆಳಗಾವಿಯ ನಾಲ್ವರು ಯಾತ್ರಾರ್ಥಿಗಳು ಗಂಗಾ, ಯಮುನಾ, ಸರಸ್ವತಿ ಸೇರುವ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುವ ಹರಕೆ ಕೊನೆಗೂ ಈಡೇರಲಿಲ್ಲ. ಇನ್ನೇನು ಪುಣ್ಯಸ್ನಾನ ಮಾಡುವ ಗಳಿಗೆ ಬರುತ್ತದೆ ಎಂದುಕೊಂಡಿದ್ದವರಿಗೆ ಕ್ಷಣಾರ್ಧದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಉಸಿರು ನಿಲ್ಲಿಸಿದರು. ಅವರ ಜೀವನದ ಕೊನೆಯ ಹರಕೆ ಮೌನಿ ಅಮಾವಾಸ್ಯೆಯೊಂದಿಗೆ ಕಮರಿ ಹೋಯಿತು.