ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ ವಿವೇಕರುಭಾರತವನ್ನು ಕಾಡುತ್ತಿರುವ ಅಸ್ಪೃಶ್ಯತೆ, ಮೂಢನಂಬಿಕೆ, ಅಂಧಶ್ರದ್ಧೆ, ಮೇಲು-ಕೀಳು, ಅನಕ್ಷರತೆ ಮುಂತಾದ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಮಹಾಪುರುಷ ಸ್ವಾಮಿ ವಿವೇಕಾನಂದರು. ಒಂದು ಕಾಲದಲ್ಲಿ ಭಾರತವನ್ನು ಹಾವಾಡಿಗರ ದೇಶ, ಮೂಢನಂಬಿಕೆಗಳ ದೇಶ ಎಂದು ಹೀಯಾಳಿಸಿದ ದೇಶಗಳಿಗೆ ಆಧ್ಯಾತ್ಮಿಕ ನಡೆಯ ಮೂಲಕ ಬೆಳಕನ್ನು ಚೆಲ್ಲಿ ದೇಶದ ಗೌರವವನ್ನು ಜಗತ್ತಿನಾದ್ಯಂತ ಪಸರಿಸಿದ ಕೀರ್ತಿ ಹೆಚ್ಚಿಸಿದವರು ವಿವೇಕರು ಎಂದು ಚಿಕ್ಕೋಡಿ ಸಿಪಿಐ ವಿಶ್ವನಾಥ ಚೌಗಲಾ ಹೇಳಿದರು.